ಉಡುಪಿ : ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ 6ನೇ ಮತ್ತು 7ನೇ ವಾರ್ಡ್ನಲ್ಲಿ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಲುಷಿತ ನೀರು ಸೇವಿಸಿದ ಕರ್ಕಿಕಳಿ ಹಾಗೂ ಮೇಡಿಕಲ್ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಕಾಫಿನಾಡಿಯ ಟ್ಯಾಂಕಿನಿಂದ ಕಲುಷಿತ ನೀರು ಪೂರೈಕೆ ಆಗಿದೆ ಎಂದು ಹೇಳಲಾಗುತ್ತಿದ್ದು, ಕರ್ಕಿಕಳಿಯಲ್ಲಿ ಸುಮಾರು 500 ಹಾಗೂ ಮೇಡಿಕಲ್ ನಲ್ಲಿ 600ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ವಾರ್ಡ್ನ ಪ್ರತಿ ಮನೆಯಲ್ಲಿ ಮೂರಕ್ಕೂ ಅಧಿಕ ಜನರಿಗೆ ವಾಂತಿ ಭೇದಿ ಆಗಿದ್ದು, 80 ವರ್ಷದ ವೃದ್ಧನ ಸ್ಥಿತಿ ಗಂಭೀರವಾಗಿದೆ. ವೃದ್ಧನನ್ನು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.