Category: ಸ್ಥಳೀಯ ಸುದ್ದಿಗಳು

ಉಡುಪಿ ಜಿಲ್ಲೆಯಲ್ಲಿ ಏ.10 ರಂದು ಸರ್ಕಾರದ ವಿರುದ್ಧ ಬೃಹತ್ ಜನಾಕ್ರೋಶ ಸಭೆ: ಕಾರ್ಕಳ ಬಿಜೆಪಿ ವತಿಯಿಂದ ಪೂರ್ವಭಾವಿ ಸಭೆ

ಕಾರ್ಕಳ: ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 10 ರಂದು ರಾಜ್ಯದ ಸರ್ಕಾರದದ ವಿರುದ್ಧ ಬಿಜೆಪಿ ವತಿಯಿಂದ ನಡೆಯಲಿರುವ ಬೃಹತ್ ಜನಾಕ್ರೋಶ ಸಭೆಯ ಹಿನ್ನೆಲೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಯಿತು. ಕಾರ್ಕಳ ಕ್ಷೇತ್ರದಿಂದ ಪ್ರತಿಭಟನಾ ಸಭೆಗೆ 2 ಸಾವಿರಕ್ಕೂ ಅಧಿಕ ಕಾರ್ಯಕರ್ತರು…

ಕಾರ್ಕಳ: ಕೇಸರಿ ಬಟ್ಟೆಯಲ್ಲಿ ಮೂಡಿ ಬಂದ ಶ್ರೀ ರಾಮ

ಕಾರ್ಕಳ: ರಾಮ ನವಮಿಯ ಪ್ರಯುಕ್ತ ಕಾರ್ಕಳ ಬೈಲೂರಿನ ತ್ರಿವರ್ಣ ಆರ್ಟ್‌ ಹಾಗೂ ಕರಾವಳಿ ಯೂತ್ ಕ್ಲಬ್ ವತಿಯಿಂದ ಇಲ್ಲಿನ ಕಲಾ ತರಗತಿಯ ವಿದ್ಯಾರ್ಥಿಗಳು ರಚಿಸಿದ 200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿಯು…

ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳ ಸೇರ್ಪಡೆ

ಕಾರ್ಕಳ: ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳನ್ನು ಆರಂಭಿಸಲಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಎಂಡೋಕ್ರಿನೊಲೊಜಿ (ಅಂತಃಸ್ರಾವಶಾಸ್ತ್ರ) ತಜ್ಞರಾದ ಡಾ. ಅನುದೀಪ್ ಗದ್ದಂ ಮತ್ತು ಡಾ. ಅವಿವರ್ ಅವಸ್ಥಿ ಅವರು ಪ್ರತೀ ಬುಧವಾರ ಮದ್ಯಾಹ್ನದ ತನಕ ಸಮಾಲೋಚನೆಗೆ…

ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ: ತಾಲೂಕಿನ ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಏಪ್ರಿಲ್ 23ರಿಂದ ಮೇ 4 ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಹಾಗೂ ವಾಹನದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ (ಏ.7) ಸೋಮವಾರ ನಡೆಯಿತು. ಅಷ್ಟಬಂಧ ಬ್ರಹ್ಮಕಲಶೋತ್ಸವ…

ಮಾಳ ಎಸ್‌ಕೆ ಬಾರ್ಡರ್‌ನಲ್ಲಿ ಲಾರಿ ಪಲ್ಟಿಯಾಗಿ 11 ಮಂದಿಗೆ ಗಾಯ

ಕಾರ್ಕಳ: ತಾಲೂಕಿನ ಮಾಳ ಎಸ್‌ಕೆ ಬಾರ್ಡರ್ ಬಳಿ ಇಂದು ಮುಂಜಾನೆ ಲಾರಿಯೊಂದು ಪಲ್ಟಿಯಾಗಿದ್ದು ಲಾರಿಯಲ್ಲಿದ್ದ 11 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತೆಲಂಗಾಣದಿಂದ ಮಂಗಳೂರಿಗೆ ಪ್ಲಾಸ್ಟಿಕ್ ಐಟಂಗಳನ್ನು ಸಾಗಿಸುತ್ತಿದ್ದ ಲಾರಿ ಇಂದು (ಎ.7) ಮುಂಜಾನೆ ಎಸ್‌ಕೆ ಬಾರ್ಡರ್ ಬಳಿ ಚಾಲಕನ ನಿಯಂತ್ರಣ ತಪ್ಪಿ…

ಎಳ್ಳಾರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಧ್ವಜಸ್ತಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ- ದೇವಸ್ಥಾನಗಳು ಸಂಸ್ಕಾರ ಜಾಗೃತಿಯ ಕೇಂದ್ರಗಳು: ಸುಬ್ರಹ್ಮಣ್ಯ ಶ್ರೀ ಅಭಿಮತ

ಅಜೆಕಾರು: ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಗಳ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ತಿಳಿಸುವ ಆಧ್ಯಾತ್ಮಿಕ ಕ್ಷೇತ್ರ. ಕ್ಷೇತ್ರ ದರ್ಶನದಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಜಾಗೃತಗೊಳ್ಳುತ್ತವೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಹೇಳಿದರು. ಅವರು…

ಕಾಳಾವರ :ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತ ಬೆಂಕಿ ತಗುಲಿ ಸಜೀವ ದಹನ

ಕುಂದಾಪುರ : ಸುಡುಮಣ್ಣಿಗೆ ಹಾಕಿದ್ದ ಬೆಂಕಿ ಬಯಲಿನ ಒಣಹುಲ್ಲಿಗೆ ಹೊತ್ತಿಕೊಂಡ ಕಾರಣದಿಂದ ಕೃಷಿಕರೊಬ್ಬರು ಬೆಂಕಿ ನಂದಿಸಲು ಹೋಗಿ ಹೊಗೆ ಆವರಿಸಿ ಉಸಿರುಗಟ್ಟಿ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಶಾಂತಾವರ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ ಕಾಳಾವರ…

ಕಾರ್ಕಳ ತೆಳ್ಳಾರು: ಪೂಜೆ ಮುಗಿಸಿ ಬರುತ್ತಿದ್ದಾತನ ಮೇಲೆ ಅನ್ಯಕೋಮಿನ ವ್ಯಕ್ತಿಯಿಂದ ಹಲ್ಲೆ ಪ್ರಕರಣ : ಪ್ರತಿದೂರು ದಾಖಲು

ಕಾರ್ಕಳ: ತೆಳ್ಳಾರಿನ ಮುಸ್ಲಿಂ ಸಮುದಾಯದ ಜಹೀರ್ ಎಂಬವರ ಮನೆಯಲ್ಲಿ ದುರ್ಗಾದೇವಿ ಆರಾಧನೆ ನಡೆಯುತ್ತಿದ್ದು,ಅಲ್ಲಿಗೆ ಪೂಜೆಗೆ ಬಂದಿದ್ದ ಸಂದರ್ಭದಲ್ಲಿ ಅನ್ಯಕೋಮಿನ ವ್ಯಕ್ತಿ ತಂಡ ಕಟ್ಟಿಕೊಂಡು ತನ್ನ ಹಲ್ಲೆ ನಡೆಸಿದ್ದಾನೆ ಎಂದು ನಿಟ್ಟೆಯ ವಿಶ್ವನಾಥ ಎಂಬವರು ನೀಡಿದ ದೂರಿನ ಕುರಿತು ರಿಯಾಜ್ ಎಂಬಾತ ಪ್ರತಿದೂರು…

ಕಾರ್ಕಳದ ಕಿಂಗ್ಸ್ ಬಾರ್ ಹಾಗೂ ಬಂಜಾರ ವೈನ್ಸ್ ಶಾಪ್ ನಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ: ಮದ್ಯ ಹಾಗೂ ನಗದು ವಶ

ಕಾರ್ಕಳ: ಅಬಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿದ ಕಾರ್ಕಳ ಅನಂತಶಯನ ರಸ್ತೆಯ ಕಿಂಗ್ಸ್ ಬಾರ್ ನ ಹೊರಗಡೆ ಯಾವುದೇ ಪರವಾನಗಿಯಿಲ್ಲದೇ ಮದ್ಯ ಬಾಟಲಿಗಳನ್ನು ಶೇಖರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಕಾರ್ಕಳ ನಗರ ಠಾಣೆಯ ಎಸ್‌ಐ ಶಿವಕುಮಾರ್ ಎಸ್,ಆರ್ ನೇತೃತ್ವದ ಪೊಲೀಸರ…

ಬ್ರಹ್ಮಾವರದ ಪೇತ್ರಿ ಜಂಕ್ಷನ್ ನಲ್ಲಿ  ಟಿಪ್ಪರ್ ಹಾಗೂ ಸ್ಕೂಟರ್ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ ಒರ್ವ ಸಾವು,ಸಹಸವಾರ ಗಂಭೀರ

ಬ್ರಹ್ಮಾವರ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಏ. 4 ರಂದು ಶುಕ್ರವಾರ ಸಂಜೆ ಬ್ರಹ್ಮಾವರ ತಾಲೂಕಿನ ಪೇತ್ರಿ ಜಂಕ್ಷನ್ ಬಳಿ ಸಂಭವಿಸಿದೆ. ಮೃತ ಯುವಕರನ್ನು…