ಕಾರ್ಕಳ: ಬಂಡಿಮಠ ಫೌಂಡೇಶನ್, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದಲ್ಲಿ ಬಡವರಿಗೆ ಕಿವಿಯ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮವು ಕಾರ್ಕಳದ ಅಯ್ಯಪ್ಪ ನಗರ ವಿಜೇತ ವಿಶೇಷ ಶಾಲೆಯಲ್ಲಿ ಮಾರ್ಚ್ 02ರಂದು ಬೆಳಗ್ಗೆ 9:30ರಿಂದ 130 ರವರೆಗೆ ನಡೆಯಲಿದೆ
ಶಿಬಿರದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಮೊದಲು ನೋಂದಾಯಿಸಿದ 30 ಜನರಿಗೆ ಈ ಸೌಲಭ್ಯವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ; 99 02 344 399, 9900 908 021 ಹಾಗೂ 98458 46 213 ಸಂಪರ್ಕಿಸಬಹುದಾಗಿದೆ
