Category: ಉಡುಪಿ

ಕಾರ್ಕಳ: ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಮೊಬೈಲ್ ನಲ್ಲಿ ಅಡಗಿದೆಯೇ ಸಾವಿನ ರಹಸ್ಯ?

ಕಾರ್ಕಳ: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಕಳೆದ ಮೂರು ತಿಂಗಳಿನಿಂದ ಕಂಪೆನಿಯೊಂದರಲ್ಲಿ ಮನೆಯಿಂದಲೇ ಆನ್ ಲೈನ್ ಮೂಲಕ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಜೀವನಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಎಂಬಲ್ಲಿ ನಡೆದಿದೆ. ಕಾರ್ಕಳ ಪೆರ್ವಾಜೆ…

ಕಾರ್ಕಳ: ನಕಲಿ ನಂಬರ್ ಪ್ಲೇಟ್ ಬಳಸಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದಾತನ ಸೆರೆ

ಕಾರ್ಕಳ: ಮಹಾರಾಷ್ಟ್ರ ನೋಂದಣಿಯ ಕಾರನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸಾರಿಗೆ ಇಲಾಖೆಯ ನಕಲಿ ನಂಬರ್ ಪ್ಲೇಟ್ ಆಳವಡಿಸಿ ಓಡಾಡುತ್ತಿದ್ದ ಕಾರನ್ನು ಕಾರ್ಕಳ ನಗರ ಠಾಣಾ ಪೊಲೀಸರು ತಡೆದು ಪರಿಶೀಲನೆ ನಡೆಸಿ ಕಾರಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಿಟ್ಟೆ ಗ್ರಾಮದ ಬೊರ್ಗಲ್ ಗುಡ್ಡೆ…

ಅ.22 ರಂದು ಯಕ್ಷಧ್ರುವ ಫೌಂಡೇಶನ್‌ನ ವಾರ್ಷಿಕ ಸಭೆ

ಕಾರ್ಕಳ: ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ )ಮಂಗಳೂರು ಇದರ ಕಾರ್ಕಳ ಘಟಕದ ವಾರ್ಷಿಕ ಸಭೆಯು ಅಕ್ಟೋಬರ್ 22ರಂದು ಕಾರ್ಕಳ ಮಾರಿಗುಡಿಯಲ್ಲಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಗೆ ಕಾರ್ಕಳ ಆಸುಪಾಸಿನ…

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯಕ್ರಮ

ಕಾರ್ಕಳ: ‘ತಂತ್ರಜ್ಞಾನ ಮತ್ತು ಸಂವಹನದ ಚಾತುರ್ಯತೆಯಿದ್ದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಇಂದಿನ ದಿನಗಳಲ್ಲಿ ಪಠ್ಯದೊಂದಿಗೆ ವಿವಿಧ ತಾಂತ್ರಿಕ ಹಾಗೂ ವ್ಯವಸ್ಥಾಪಕ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ’ ಎಂದು ಮರ್ಸಿಡೀಸ್ & ಇಚರ್ ಸಂಸ್ಥೆಗಳಿಗೆ ಸಿಎಬಿ ಎಸ್ಸೆಂಬ್ಲಿ ಸಾಫ್ಟವೇರ್ ನ ಎಕ್ಸ್ಟರ್ನಲ್ ಕನ್ಸಲ್ಟೆಂಟ್ ಆಗಿರುವ…

ಸಾಣೂರು: ಉರುಳಿಗೆ ಸಿಲುಕಿದ್ದ ಚಿರತೆಯ ರಕ್ಷಣೆ

ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಇಂದಿರಾನಗರ ಹಲೆಕ್ಕಿ ಪರಿಸರದಲ್ಲಿ ಉರುಳಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮೆಸ್ಕಾಂ ಲೈನ್ ಮ್ಯಾನ್ ದೇವಣ್ಣ ರಾವ್ ಮತ್ತು ಸಾಣೂರು…

ಕಾರ್ಕಳ: ಪರಶುರಾಮನ ನಕಲಿ ಪ್ರತಿಮೆ ವಿರುದ್ದ ಕಾಂಗ್ರೆಸ್ ಬೃಹತ್ ಪ್ರತಿಭಟನೆ- ನಕಲಿ ಪರಶುರಾಮನ ಮೂರ್ತಿ ಪ್ರತಿಷ್ಟಾಪಿಸಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಕಾರ್ಕಳ:ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬಿಜೆಪಿಯವರು ಚುನಾವಣೆಗಳನ್ನು ಗೆಲ್ಲಲು ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವುದಕ್ಕೆ ಹಾಗೂ ರಾಜಕೀಯ ಲಾಭಕ್ಕಾಗಿ ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಕಲಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದರು. ಧರ್ಮ,ನಂಬಿಕೆಯನ್ನು ಘಾಸಿಗೊಳಿಸಿದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮಾತ್ರವಲ್ಲದೇ…

ಮಠಾಧೀಶರು,ಗಣ್ಯರ ಸಮ್ಮುಖದಲ್ಲೇ ಧರ್ಮಸಂರಕ್ಷಣಾ ಸಮಾವೇಶವನ್ನು ವೈಯುಕ್ತಿಕ ನಿಂದನೆಗೆ ಬಳಕೆ: ಅವಾಚ್ಯ ಹಾಗೂ ಕೀಳುಮಟ್ಟದ ಮಾತುಗಳನ್ನಾಡಿದ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ವ್ಯಾಪಕ ಟೀಕೆ

ಕಾರ್ಕಳ: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಕೆಡಿಸಲು ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಭಾನುವಾರ ಜನಜಾಗೃತಿ ವೇದಿಕೆ ವತಿಯಿಂದ ಕಾರ್ಕಳದಲ್ಲಿ ಭಾನುವಾರ ನಡೆದ ಧರ್ಮಸಂರಕ್ಷಣಾ ಸಭೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪವರ್ ಟಿವಿ ಖಾಸಗಿ…

ಕಾರ್ಕಳ: ಧರ್ಮಸಂರಕ್ಷಣಾ ಸಮಾವೇಶ: ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವ ನೆಪದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳ ವಿರುದ್ಧ ದಾಳಿಯಾಗುತ್ತಿದೆ: ಶಾಸಕ ಸುನಿಲ್ ಕುಮಾರ್

ಕಾರ್ಕಳ: ಹಿಂದೂ ಧರ್ಮದ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಅವಹೇಳನ ಮಾಡಿ ಧಾರ್ಮಿಕ ನಂಬಿಕೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊAಡು ಆಕೆಗೆ ನ್ಯಾಯ ಕೊಡಿಸದಬೇಕು ಎಂಬ ನೆಪದಲ್ಲಿ ಧರ್ಮಸ್ಥಳದ ಮೇಲೆ ದಾಳಿ ನಡೆಸುವ ಮೂಲಕ ಹಿಂದೂ ಧರ್ಮವನ್ನು…

ನಂದಳಿಕೆ ಗೋಳಿಕಟ್ಟೆ ಶಾಸನದ ಮರು ಅಧ್ಯಯನ

ಕಾರ್ಕಳ : ತಾಲೂಕಿನ ನಂದಳಿಕೆ ಗ್ರಾಮದ ಗೋಳಿಕಟ್ಟೆಯ ಶಾಸನವನ್ನು ಶಿರ್ವದ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ತ್ವ ವಿದ್ಯಾರ್ಥಿಗಳು ತಮ್ಮ ಪುರಾತತ್ತ್ವ ಉಪನ್ಯಾಸಕರದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಮರು ಅಧ್ಯಯನಕ್ಕೆ ಒಳಪಡಿಸಿದ್ದು ಶಾಸನದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕಣ…

ಪರಶುರಾಮ ಮೂರ್ತಿ ನಾಪತ್ತೆಯಾಗಿದೆ,ಸತ್ಯ ಶೋಧನೆ ಸಮಿತಿ ರಚನೆಯಿಂದ ಪ್ರತಿಮೆಯ ನೈಜತೆ ಬಯಲಾಗಬೇಕು: ಉದಯ ಶೆಟ್ಟಿ ಮನಿಯಾಲು ಆಗ್ರಹ

ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪನೆಯಾಗಿರುವ ಪರಶುರಾಮ ಮೂರ್ತಿಯ ನೈಜತೆ ಕುರಿತು ಈ ಹಿಂದೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು, ಇದೀಗ ಪರಶುರಾಮ ಮೂರ್ತಿಯೇ ನಾಪತ್ತೆಯಾಗಿದ್ದು, ಈ ಯೋಜನೆಯ ಕುರಿತು ಸರ್ಕಾರದ ವತಿಯಿಂದ ಸತ್ಯ ಶೋಧನೆ ಸಮಿತಿ ರಚನೆಯಾಗಬೇಕು ಮಾತ್ರವಲ್ಲದೇ ಈ ಸಮಿತಿಯ…