

ನವದೆಹಲಿ,ಅ.07: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಪದೇಪದೇ ಬದಲಾವಣೆ ಮಾಡುವುದಕ್ಕೆ ಕಡಿವಾಣ ಹಾಕಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಇನ್ನುಮುಂದೆ ದರ ಪರಿಷ್ಕರಣೆಯ ಪ್ರಸ್ತಾವನೆಗಳನ್ನು ವರ್ಷಕ್ಕೊಮ್ಮೆ ಮಾತ್ರ ಪರಿಗಣಿಸಲು ಮಂಡಳಿ ಉದ್ದೇಶಿಸಿದ್ದು, ಹೊಸ ದರಗಳನ್ನು ಪ್ರತೀ ಹಣಕಾಸು ವರ್ಷದ ಆರಂಭ ಅಂದರೆ ಏಪ್ರಿಲ್ 1ರಿಂದಲೇ ಜಾರಿಗೆ ತರಲು ನಿರ್ಧರಿಸುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ದರಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದರಿಂದ ಉದ್ಯಮಗಳಿಗೆ ದೀರ್ಘಾವಧಿಯ ಒಪ್ಪಂದಗಳ ಬೆಲೆ ನಿಗದಿ ಮಾಡಲು ಹಾಗೂ ಬಂಡವಾಳ ವೆಚ್ಚದ ಯೋಜನೆಗಳನ್ನು ರೂಪಿಸಲು ಸುಲಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಕ್ಟೋಬರ್ 8ರಂದು ನಡೆಯಲಿರುವ 57ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರ ಬದಲಾವಣೆಯ ಪ್ರಮುಖ ಪ್ರಸ್ತಾವಗಳು ಈ ಅಜೆಂಡಾದಲ್ಲಿಲ್ಲ. ಕಳೆದ ವರ್ಷ ತೆರಿಗೆ ದರ ಸಂರಚನೆಯನ್ನು ಸರಳಗೊಳಿಸಲಾಗಿದ್ದು, ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯು ಗ್ರಾಹಕರು, ಉದ್ಯಮ ಹಾಗೂ ದೇಶದ ಆರ್ಥಿಕತೆಯ ದೃಷ್ಟಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜೂನ್ ತಿಂಗಳ ಬಳಿಕ ತೆರಿಗೆ ಆದಾಯವೂ ಹೆಚ್ಚಾಗಿದ್ದು, ಮಾಸಿಕ ಜಿಎಸ್‌ಟಿ ಸಂಗ್ರಹವು ಸತತವಾಗಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಹೀಗಾಗಿ, ಪ್ರಸ್ತುತ ಸಭೆಯಲ್ಲಿ ಕೇವಲ ದರ ಸಂರಚನೆಯನ್ನು ಮತ್ತಷ್ಟು ಸರಳಗೊಳಿಸುವ ಮತ್ತು ಕೆಲವು ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸುವ ಸೀಮಿತ ಪ್ರಸ್ತಾವನೆಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ.
ಇದೇ ವೇಳೆ, ಇ-ಕಾಮರ್ಸ್ ವೇದಿಕೆಗಳ ಮೂಲಕ ನಡೆಯುವ ಸರಕು ಮಾರಾಟಕ್ಕೆ ಸಂಬAಧಿಸಿದAತೆ ಪ್ರಮುಖ ಪ್ರಸ್ತಾವನೆಯೊಂದು ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ. ಇ-ಕಾಮರ್ಸ್ ಮೂಲಕ ಮಾರಾಟವಾಗುವ ಸರಕುಗಳಿಗೆ ಇನ್‌ಪುಟ್ ತೆರಿಗೆ ಕ್ರೆಡಿಟ್ ಸೌಲಭ್ಯವಿಲ್ಲದೆ ಏಕರೂಪದ ಶೇ. 5ರಷ್ಟು ಜಿಎಸ್‌ಟಿ ದರವನ್ನು ಅನ್ವಯಿಸುವ ಕುರಿತು ಈ ಸಭೆಯಲ್ಲಿ ಆಲೋಚನೆ ನಡೆಸುವ ಸಾಧ್ಯತೆಯಿದೆ.





.
.
.
.
.
.
.
.
.
.
.
.
.
.
.
.
.
.
.
.
