

ಬೆಂಗಳೂರು,ಅ. 06: ಕರ್ನಾಟಕದಲ್ಲಿ ಹಾಲಿನ ದರ ಏರಿಕೆಗೆ ಸಂಬAಧಿಸಿದAತೆ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಲೀಟರ್ ಹಾಲಿನ ದರ 10 ರೂಪಾಯಿ ಹೆಚ್ಚಿಸಬೇಕೆಂದು ಹಾಲು ಮಾರಾಟ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ ಇದೀಗ ಸರ್ಕಾರ ಅಳೆದು ತೂಗಿ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ತೀರ್ಮಾನಿಸಿದೆ.
ಈ ಸಂಬAಧ ಇಂದು (ಅಕ್ಟೋಬರ್ 06) ನಡೆದ ಸಚಿವ ಸಂಪುಟದಲ್ಲಿ ಹಾಲಿನ ದರ ಏರಿಕೆ ಬಗ್ಗೆ ಚರ್ಚೆಯಾಗಿದ್ದು, ದರ ಎಷ್ಟು ಹೆಚ್ಚಳ ಎನ್ನುವುದನ್ನು ತೀರ್ಮಾನಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಸಿಎಂ ಡಿಕೆ ಶಿವಕುಮಾರ್ 8 ರೂಪಾಯಿ ಏರಿಕೆಗೆ ಒಲವು ತೋರಿದ್ದು, ಇದಕ್ಕೆ ಸಚಿವ ಸಂಪುಟ ಸಹ ಸಮ್ಮತಿಸಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಹೀಗಾಗಿ ಚುನಾವಣಾ ಆಯೋಗದ ಅನುಮತಿ ಪಡೆದು ದರ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದೆ. ಬಹುತೇಕ ದಸರಾ ಬಳಿಕ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. 80:20 ರಂತೆ ದರ ಏರಿಕೆ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಅಂದರೆ, 8 ರೂ. ಏರಿಕೆಯಾದರೆ 6 ರೂ. ರೈತರಿಗೆ ಮತ್ತು 2 ರೂ. ಒಕ್ಕೂಟಗಳಿಗೆ ಸಿಗಲಿದೆ.





.
.
.
.
.
.
.
.
.
.
.
.
.
.
.
.
.
.
.
.
