Share this news

ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಅಂತಿಮ ದಿನ ಭಕ್ತರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಆಕರ್ಷಿಸಿದ್ದು, ಈ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹವನ್ನು ಭಕ್ತಿಯಲ್ಲಿ ಮಿಂದೇಳುವAತಾಗಿದ್ದು, ನಂಬಿಕೆ, ಭರವಸೆ, ಮತ್ತು ಸಮುದಾಯ ಸೌಹಾರ್ದತೆಯ ಪ್ರತೀಕವಾಗಿತ್ತು.ಮಹೋತ್ಸವದ ಶೃಂಗಾರ ದಿನವಾದ ಗುರುವಾರ ಎಂಟು ಬಲಿಪೂಜೆಗಳು ನೆರವೇರಿದವು. ಬಾರಾಯ್ ಪುರ್ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅ/ವಂ/ ಡಾ. ಸಲ್ವಾದೋರ್ ಲೋಬೊ ಅವರು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿದರು. ಗುರು ಜಿತೇಶ್, ತಮ್ಮ ಧಾರ್ಮಿಕ ಬೋಧನೆಯಲ್ಲಿ, ಭರವಸೆಯ ಜೀವನ, ಕ್ರಿಸ್ತನೊಂದಿಗೆ ಯಾತ್ರಾರ್ಥಿಗಳಾಗುವ ಮಹತ್ವ, ಮತ್ತು ಜುಬಿಲಿ ವರ್ಷದ ಆಶಯಗಳನ್ನು ಪ್ರಬೋಧಿಸಿದರು.

ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಮಹೋತ್ಸವದಲ್ಲಿ ಪಾಲ್ಗೊಂಡು, ಬಲಿಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಪುಷ್ಕರಣಿಯ ಜಲತೀರ್ಥ, ಮೊಂಬತ್ತಿ ಬೆಳಗಿಸುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪಪ್ರಸಾದ ಸೇವೆ ಮುಂತಾದ ಆಚರಣೆಗಳಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ಬಸಿಲಿಕಾದ ವಠಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹೂವಿನ ತೋರಣಗಳು, ವಿದ್ಯುತ್ ದೀಪಾಲಂಕಾರ, ಮತ್ತು ವೈಭವೀಕರಿಸಲಾದ ಶೃಂಗಾರದಿAದ ಭಕ್ತರ ಮನಸ್ಸನ್ನು ಸೆಳೆಯುವಂತಾಗಿದ್ದವು. ಸಂಜೆಯ ಅಂತಿಮ ಪೂಜೆಯ ಬಳಿಕ, ಸಂತ ಲಾರೆನ್ಸ್ ಅವರ ಪವಾಡಮಯ ಪ್ರತಿಮೆಯನ್ನು ಗುಡಿಗೆ ಮೆರವಣಿಗೆಯ ಮೂಲಕ ಮರುಸ್ಥಾಪಿಸಲಾಯಿತು, ಮತ್ತು ಮಹೋತ್ಸವದ ಧ್ವಜವನ್ನು ಗೌರವಯುತವಾಗಿ ಕೆಳಗಿಳಿಸಲಾಯಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *