ಕಾರ್ಕಳ: ನಿಟ್ಟೆಯ ಅತ್ತೂರು ನೆಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಹಾಗೂ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ಶುಕ್ರವಾರ ರಾಜರಾಜೇಶ್ವರಿ ದೇವಿಯ ಮೂರ್ತಿ ಪುನಃ ಪ್ರತಿಷ್ಠೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಪುನಃಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಪುಣ್ಯಾಹ ಗಣಯಾಗ, ರತ್ನ ನ್ಯಾಸ,ಶ್ರೀದೇವರ
ಪ್ರತಿಷ್ಠೆ,ಅಷ್ಟಬಂಧ ಸ್ಥಾಪನೆ,ಜೀವಕಲಶಾಭಿಷೇಕ,ನ್ಯಾಸಾದಿಗಳು,ಮಹಾಪೂಜೆ,ಪ್ರತಿಷ್ಟಾ ಬಲಿ,ಆಚಾರ್ಯ ದಕ್ಷಿಣೆ, ಚಂಡಿಕಾ ಯಾಗ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಾಸಕ ಸುನಿಲ್ ಕುಮಾರ್,ಅನುವಂಶಿಕ ಆಡಳಿತ ಮೊಕ್ತೇಸರ ಜಗನ್ನಾಥ, ಆಡಳಿತ ಮೊಕ್ತೇಸರ ಸುನಿಲ್ ಕೆ,ಆರ್,ಜೀರ್ಣೋದ್ಧರ ಸಮಿತಿಯ ಅಧ್ಯಕ್ಷ ಸುಧೀರ ಜೆ,ಹೆಗ್ಡೆ ಬೈಲೂರು,ಕಾರ್ಯಾಧ್ಯಕ್ಷ ಮಹಾಬಲ ಸುವರ್ಣ,ಪ್ರಧಾನ ಕಾರ್ಯದರ್ಶಿ ಸುಮಿತ್ ಕೌಡೂರು,ಅರ್ಚಕ ನಿತ್ಯಾನಂದ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಊರ ಭಕ್ತಾಧಿಗಳು ಪಾಲ್ಗೊಂಡಿದ್ದರು.