Share this news

 

ಉಡುಪಿ:EMRI ಗ್ರೀನ್ ಹೆಲ್ತ್ ಸರ್ವಿಸ್ 108 ಆಂಬುಲೆನ್ಸ್ ಅರೋಗ್ಯ ಕವಚದ ದಿನಾಚರಣೆಯು ಏ 2 ರಂದು ಉಡುಪಿ ಜಿಲ್ಲೆಯ ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ‌
ಆರೋಗ್ಯ ಕವಚದ ಅಧಿಕಾರಿ ಮಹಾಬಲ,ಜಿಲ್ಲಾ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಮತ್ತು ವೈದ್ಯಾಧಿಕಾರಿಗಳು ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಉಡುಪಿ ಜಿಲ್ಲೆಯ 108 ಆರೋಗ್ಯ ಕವಚ ಉಡುಪಿ ಜಿಲ್ಲೆಯ ಸಿಬ್ಬಂದಿಗಳು ಕೇಕ್ ಕತ್ತರಿಸಿ EMT ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾದಿಕಾರಿ ಮಾತನಾಡಿ, 108 ಕವಚ ದ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ನಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕೆಂದರು.ಬಳಿಕ ಕೋಟದ 108 ಸಿಬ್ಬಂದಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು
ಡಾ. ಆರತಿ ಕಾರಂತ್ ,ದಂತ ವೈದ್ಯಾಧಿಕಾರಿ ಡಾ. ಅನಾಲಿನ್ Ncd ವೈದ್ಯಾಧಿಕಾರಿ,
ಆಡಳಿತ ಅಧಿಕಾರಿ ಡಾ. ಮಾಧವ ಪೈ ,ಹಿರಿಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *