Share this news

ಕಾರ್ಕಳ: ಕಾರ್ಕಳ ಪುಲ್ಕೇರಿ ಬೈಪಾಸ್ ನಲ್ಲಿ ಜನವರಿ 19 ರಂದು ನೂತನವಾಗಿ “ಕಾರ್ಕಳ ಇನ್” ವಾಣಿಜ್ಯ ಸಮುಚ್ಛಯ ಹಾಗೂ ಹೋಟೆಲ್ “ಅನಘ ಗ್ರ್ಯಾಂಡ್” ಶುಭಾರಂಭಗೊಳ್ಳಲಿದೆ. ಆ ಪ್ರಯುಕ್ತ  ಕಾರ್ಕಳ ಸಂಸ್ಕೃತಿ ನೃತ್ಯ ವೈಭವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಕಾರ್ಕಳ ಇನ್ ನ ರಾವ್ ಗಾರ್ಡನ್ ನಲ್ಲಿ ಜನವರಿ 19 ರಂದು ಸಂಜೆ 5 ಗಂಟೆಗೆ ಈ ಸ್ಪರ್ಧೆ ಜರುಗಲಿದ್ದು, ಒಂದು ತಂಡದಲ್ಲಿ ಕನಿಷ್ಠ ನಾಲ್ಕು ಸದಸ್ಯರಿಗಿಂತ ಹೆಚ್ಚಿನ ಸದಸ್ಯರು ಭಾಗವಹಿಸಬೇಕು. ಸ್ಪರ್ಧೆಯಲ್ಲಿ 30 ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು, ಒಂದು ತಂಡಕ್ಕೆ ಗರಿಷ್ಠ 7 ನಿಮಿಷದ ಕಾಲಾವಕಾಶ ನೀಡಲಾಗುವುದು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 15,000, ದ್ವಿತೀಯ ಬಹುಮಾನ ರೂ. 10,000 ಹಾಗೂ ತೃತೀಯ ಬಹುಮಾನ ರೂ. 7,000 ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.

ಹೆಸರನ್ನು ನೋಂದಾಯಿಸಲು ಜನವರಿ 5 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಶಿಶ್ ಶೆಟ್ಟಿ ಹಾಗೂ ಸುನಿಲ್ ಕೋಟ್ಯಾನ್ ಇವರನ್ನ ಸಂಪರ್ಕಿಸಬಹುದು. ಮೊ: 8277392576 9880380305

 

Leave a Reply

Your email address will not be published. Required fields are marked *