ಕಾರ್ಕಳ: ಟೂ ವೀಲರ್ ವರ್ಕ್ ಶಾಪ್ ಎದುರಿನಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಎಗರಿಸಿರುವ ಘಟನೆ ಜ.19 ರ ರಾತ್ರಿ ನಡೆದಿದೆ.
ಕಾರ್ಕಳ ಕಸಬಾ ಗ್ರಾಮದ ವಿಕೆ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಇರುವ ಶ್ರೀ ಕಾಳಿಕಾಂಬಾ ಟೂ ವೀಲರ್ ವರ್ಕ್ ಶಾಪ್ ಹೊರಗಡೆ ನಿಲ್ಲಿಸಿದ್ದ ಯಮಹಾ ಕಂಪೆನಿಯ ಬೈಕನ್ನು ಜ.19 ರಂದು ರಾತ್ರಿ ಎಗರಿಸಿದ್ದು, ಜ.20 ರಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
