ಕಾರ್ಕಳ: ಜಾಗದ ವಿಚಾರದಲ್ಲಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಕೌಡೂರು ಎಂಬಲ್ಲಿ ಜ.1 ರಂದು ನಡೆದಿದೆ.
ಕೌಡೂರಿನ ಮಲ್ಲಿಕಾ ಎಂಬವರ ಮನೆಗೆ ಆರೋಪಿಗಳಾದ ಗಾಯತ್ರಿ, ಸಾವಿತ್ರಿ, ಲತಾ, ಮದನ್ ಹಾಗೂ ಪ್ರಶಾಂತ್ ಎಂಬವರು ಜಾಗದ ವಿಚಾರದಲ್ಲಿ ಏಕಾಏಕಿ ಮನೆಗೆ ನುಗ್ಗಿ ಮಲ್ಲಿಕಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರನ್ನು ರಕ್ಷಿಸಲು ಬಂದ ಬಾನುಮತಿ ಅವರಿಗೂ ಹಲ್ಲೆ ನಡೆಸಿದ್ದಾರೆ ಎಂದು ಮಲ್ಲಿಕಾ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.