ಕಾರ್ಕಳ: ಉಸಿರಾಟದ ಸಮಸ್ಯೆಗೆ ಒಳಗಾಗಿ ಸಿದ್ದಾಪುರದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೂಡಬಿದ್ರೆಯಲ್ಲಿ ಜ.2 ರ ಮುಂಜಾನೆ ನಡೆದಿದೆ. ಸಿದ್ದಾಪುರದ ಸುಬ್ರಮಣ್ಯ (29) ಮೃತಪಟ್ಟವರು.
ಅವರು ಸಿದ್ದಾಪುರದಲ್ಲಿ ಕೆ.ಇ.ಬಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಜ.1 ರಂದು ಮೂಡಬಿದ್ರೆಯಲ್ಲಿರುವ ತನ್ನ ಸ್ನೇಹಿತ ಪ್ರದೀಪ್ ನೊಂದಿಗೆ ಆತನ ರೂಂನಲ್ಲಿದ್ದರು. ಅಂದು ಅಲ್ಲಿಯೇ ಮಲಗಿದ್ದ ಸುಬ್ಮಮಣ್ಯನಿಗೆ ಜ.2 ರ ಮುಂಜಾನೆ 4 ಗಂಟೆಯ ವೇಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಆತನನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಆ ವೇಳೆಗಾಗಲೇ ಸುಬ್ರಮಣ್ಯ ಮೃತಪಟ್ಟಿದ್ದ. ಆತ ಉಸಿರಾಟದ ಸಮಸ್ಯೆ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಕಾಕ್ಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.