ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ಮನೆಗೆ ಮರ ಬಿದ್ದು ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಗುಂಡ್ಯ ಪತ್ತೊಂಜಿ ಕಟ್ಟೆಯ ವಸಂತಿ ಅವರ ವಾಸದ ಮನೆಗೆ ತೆಂಗಿನ ಮರ ಬಿದ್ದು ಶೀಟ್ ಮುರಿದು ಅಂದಾಜು 50, 000 ನಷ್ಟವಾಗಿದೆ. ಜಯಂತಿ ಎಂಬವರ ವಾಸದ ಮನೆಯ ಹಂಚು ಮುರಿದು 10,000 ರೂ. ನಷ್ಟ ಸಂಭವಿಸಿದೆ. ಅಮಿತ ಅವರ ವಾಸದ ಮನೆಗೆ ತೆಂಗಿನ ಮರ ಬಿದ್ದು ಹಂಚು ಮುರಿದು ರೂ. 20,000 ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
K