ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ನಿವಾಸಿಯೊಬ್ಬರು ಜೂ.21ರ ಶನಿವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಸಬಾ ನಿವಾಸಿ ನಜೀರ್ ಅಹಮ್ಮದ್ ಶೇಖ್ (58) ಆತ್ಮಹತ್ಯೆ ಮಾಡಿಕೊಂಡವರು.
ಅವರಿಗೆ ಸಕ್ಕರೆ ಖಾಯಿಲೆಯ ಜೊತೆಗೆ ಬೇರೆ ಖಾಯಿಲೆಯೂ ಇದ್ದು ಅದೇ ಕಾರಣಕ್ಕೆ ಅಥವಾ ಇನ್ನಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ಅವರ ಸಹೋದರ ದೂರು ನೀಡಿದ್ದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.