ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಸುಶಾಸನ ದಿನ, ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಡಿ.25 ರಂದು ಕಾರ್ಕಳ ಶಾಸಕರ ಜನಸೇವಾ ಕಛೇರಿಯಲ್ಲಿ ಜರುಗಿತು.
ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿಯ ಅಂಗವಾಗಿ ಶಾಸಕರಾದ ವಿ ಸುನಿಲ್ ಕುಮಾರ್ ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಥಾಯ್ಲೆಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ನಮ್ಮ ಮಹಿಳಾ ಮೋರ್ಚಾ ಸದಸ್ಯೆಯಾದ ಯರ್ಲಪಾಡಿಯ ಕು.ಸುಷ್ಮಾ ತೆಂಡೂಲ್ಕರ್ ಹಾಗೂ ಹೆರ್ಮುಂಡೆಯ ಯೋಗಪಟು ಕು.ಅನನ್ಯ ಇವರಿಗೆ ಮಹಿಳಾ ಮೋರ್ಚಾ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರಾಜೇಶ್ ರೆಂಜಾಳ, ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿನಯ ಡಿ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ವಿನುತಾ ಆಚಾರ್ಯ ಹಾಗೂ ಸುಮಾ ರವಿಕಾಂತ್, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಪದಾಧಿಕಾರಿಗಳಾದ ಭಾರತಿ ಅಮೀನ್, ನೀತಾ ಆಚಾರ್ಯ, ಶಶಿಮಣಿ, ಚಂದ್ರಿಕಾ ರಾವ್, ಮಾಜಿ ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್, ಮಾಜಿ ತಾಪಂ ಸದಸ್ಯರಾದ ಮಂಜುಳಾ, ಮರ್ಣೆ ಗ್ರಾಪಂ ಮಾಜಿ ಅಧ್ಯಕ್ಷಾರಾದ ಸುಶೀಲಾ ಪೂಜಾರ್ತಿ ಉಪಸ್ಥಿತರಿದ್ದರು.
