ಕಾರ್ಕಳ ತಾಲೂಕು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿಯಿAದ ಇರುವತ್ತೂರಿಗೆ ಹೋಗುವ ರಸ್ತೆಯಲ್ಲಿ ಸಮದ್ ಖಾನ್ ರವರ ಮನೆಯ ಎದುರು ಭಾಸ್ಕರ ಸಮಗಾರರ ಮನೆಯ ಪಕ್ಕದಲ್ಲಿಯೇ ರಸ್ತೆ ಬದಿಯ ಗುಡ್ಡವನ್ನು ಕಳೆದ ಒಂದೆರಡು ವಾರಗಳಿಂದ ನಿರಂತರವಾಗಿ ಜೆಸಿಬಿಯಿಂದ ಅಗೆದು ಮಣ್ಣು ತೆಗೆಯಲಾಗಿದೆ. ಪರಿಣಾಮವಾಗಿ ಪಕ್ಕದಲ್ಲಿಯೇ ಇರುವ ವಿದ್ಯುತ್ ತಂತಿ ಕಂಬದ ಬುಡ ಅಭದ್ರವಾಗಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಅಪಾಯ ಎದುರಾಗಿದೆ.
ಆದ್ದರಿಂದ ಕೂಡಲೇ ಮೆಸ್ಕಾಂ ಇಲಾಖೆಯವರು ಎಚ್ಚೆತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬವನ್ನು ಭದ್ರಪಡಿಸಬೇಕು, ಅಥವಾ ರಸ್ತೆಯ ಬದಿಯಲ್ಲಿ ಮರು ಸ್ಥಾಪಿಸಬೇಕು.
ರಸ್ತೆ ಬದಿಯ ಗುಡ್ಡವನ್ನು ಅಗೆಯುವಾಗ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತ ಸಂಬAಧಪಟ್ಟವರಿಗೆ ಸಾಣೂರು ಗ್ರಾಮ ಪಂಚಾಯತ್, ಸಂಬAಧಪಟ್ಟ ಇಲಾಖೆ ಹಾಗೂ ಮೆಸ್ಕಾಂನವರು ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ರಸ್ತೆ ಬದಿಯಲ್ಲಿ ಈ ರೀತಿ ಮನಬಂದAತೆ ಗುಡ್ಡವನ್ನು ಕಡಿದು ಮಣ್ಣನ್ನು ಸಾಗಿಸುತ್ತಿದ್ದರೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾವುದೇ ತೊಂದರೆ ಆಗದಂತೆ ಸ್ಥಳೀಯಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
