ಕಾರ್ಕಳ: ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ಮುನಿಸು ಉಂಟಾಗುತ್ತದೆ. ಮೊದಲು ನಮ್ಮ ಮನೆಯ ಸುತ್ತ ಸ್ವಚ್ಛ ಮಾಡಿಕೊಳ್ಳಬೇಕು, ನಂತರ ಶಾಲೆಯ ಆವರಣ ಮತ್ತು ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ಬಾಟಲ್‌ಗಳನ್ನು ಎಲ್ಲಂದರಲ್ಲಿ ಬಿಸಾಡಬಾರದು. ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಬೇಕು. ಆದಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕು.ವಿಘಟನೆಗೊಳ್ಳದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳು ಕ್ಯಾನ್ಸರ್, ಅಸ್ತಮಾ ಇತ್ಯಾದಿ ಕಾಯಿಲೆಗಳನ್ನು ಉಂಟುಮಾಡಬಹುದು. ಪರಿಸರ ಮಾಲಿನ್ಯದಿಂದ ನಮ್ಮ ಭೂಮಿ ಕಲುಷಿತಗೊಂಡಿರುವುದರಿAದ ನಾವು ಈಗಲಾದರೂ ಜಾಗೃರತಾಗಬೇಕು ಎಂದು ಜೀವಶಾಸ್ರö್ತಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಯೂ ಆಗಿರುವ ಗುರುಕುಮಾರ್ ಹೇಳೀದರು.
ಅವರು ಕೆ.ಎಂ.ಇ.ಎಸ್ ಪ್ರೌಢಶಾಲಾ ವಿಭಾಗದ ವಿಶ್ವ ಪರಿಸರ ದಿನ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನದಾಫ್ ಅಹಮ್ಮದ್ ಮಾತನಾಡಿ ಸ್ವಚ್ಛತೆಯಿಂದ ನಮ್ಮ ಮನಸ್ಸು ಯಾವಾಗಲೂ ಸಂತೋಷವಾಗಿರುತ್ತದೆ. ಗಿಡ
ನೆಡುವುದರ ಮೂಲಕ ನಮ್ಮ ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿಯವರು ಮಾತನಾಡಿ, ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯ, ಗಿಡ ನೆಡುವುದರ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲೊಲಿಟಾ ಡಿ’ಸಿಲ್ವಾ ಪರಿಸರ ದಿನದ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ಮಾತನಾಡಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಕುಸಿಯುವುದು ಮತ್ತು ಕೃತಕ ಮಳೆಯಿಂದ ಸಾವು ನೋವು ಉಂಟಾಗುವುದು ಮರಗಳನ್ನು ಕಡಿಯುವುದರಿಂದ. ಮರಗಳ ನಾಶದಿಂದ ಹಸಿರುಮನೆ ಪರಿಣಾಮ ಉಂಟಾಗಿ ದ್ರುವ ಪ್ರದೇಶಗಳ ಮಂಜು ಕರಗಿ ಸಮುದ್ರದ ನೀರಿನ ಮಟ್ಟ ಏರುವುದು ಎಂದು ಹೇಳಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಗಿಡಗಳನ್ನು ವಿತರಿಸಿದರು. ಸಂಸ್ಥೆಯ ಪಕ್ಕದಲ್ಲಿರುವ ರೋಟರಿ ಆಸ್ಪತ್ರೆ ಮಣಿಪಾಲಕ್ಕೆ ವಿದ್ಯಾರ್ಥಿಗಳು ಬೇಟಿಯಾಗಿ ಪರಿಸರ ರಕ್ಷಣೆಯ ಮಾಹಿತಿಯನ್ನು
ನೀಡಿದರು. ಮಣಿಪಾಲ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಗಿಡಗಳನ್ನು ನೆಡುವುದರ ಮೂಲಕ ಪರಿಸರ
ರಕ್ಷಣೆಗೆ ಚಾಲನೆ ನೀಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿದರು. ವಿದ್ಯಾರ್ಥಿನಿ ಜೈನಾಬ್ ಸ್ವಾಗತಿಸಿ, ಅನನ್ಯಾ ಧನ್ಯವಾದವಿತ್ತರು. ಆಯೆಷಾ ಮೆಹರಿನ್ ಕಾರ್ಯಕ್ರಮ ನಿರ್ವಹಿಸಿದರು.