ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೌಡೂರು ಗ್ರಾಮದ ಗಡದಲ್ಕೆ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೌಡೂರು ನಿವಾಸಿ ಎಲಜಿಬೆತ್ ಡಿಸೋಜಾ ಎಂಬವರಿಗೆ ಸುಮಾರು 10 ವರ್ಷಗಳಿಂದ ಬಿಪಿ, ಶುಗರ್ ಖಾಯಿಲೆ ಇದ್ದು, ಸುಮಾರು 20 ದಿನಗಳ ಹಿಂದೆ ಕಿಡ್ನಿ ಸಮಸ್ಯೆ ಇರುವುದಾಗಿ ವೈದ್ಯರು ತಿಳಿಸಿದ್ದರು. ಆ ಬಗ್ಗೆ ಉಡುಪಿ ಮತ್ತು ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಮಗಿರುವ ಖಾಯಿಲೆಯಿಂದ ಮನನೊಂದು ಮಂಗಳವಾರ ರಾತ್ರಿ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಶಂಕಿಸಲಾಗಿದ್ದು, ಅವರ ಕುತ್ತಿಗೆಗೆ ನೇಣು ಹಾಕಿಕೊಂಡ ರೀತಿ ಅನುಮಾನಾಸ್ಪದವಾಗಿದೆ ಎಂದು ಅವರ ಪತಿ ಜೋಸೆಪ್ ಡಿಸೋಜಾ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ