ಮಂಗಳೂರು : ರಾಜ್ಯ ವಿಧಾನ ಪರಿಷತ್‌ನ ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಅ.21ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ರಾಜು ಪೂಜಾರಿ ಅವರಿಗೆ ಟಿಕೆಟ್ ನೀಡಿದೆ.
ಬೈಂದೂರಿನ ರಾಜು ಪೂಜಾರಿ, ಉಡುಪಿಯ ಉದಯ ಶೆಟ್ಟಿ ಮುನಿಯಾಲು, ಕಾರ್ಕಳದ ಡಿ.ಆರ್.ರಾಜು, ಉಡುಪಿಯ ಹರಿಪ್ರಸಾದ್ ರೈ, ಬಿ.ಭುಜಂಗ ಶೆಟ್ಟಿ ಮತ್ತು ಬಂಟ್ವಾಳದ ಚಂದ್ರಪ್ರಕಾಶ ಶೆಟ್ಟಿ ತುಂಬೆ ಅವರು ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು.
ರಾಜು ಪೂಜಾರಿ ಅವರ ಆಯ್ಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದನೆ ನೀಡಿದ್ದು , ಈಗಾಗಲೇ ಚುನಾವಣಾ ರಣಕಣ ರಂಗೇರಿದ್ದು, ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ