Share this news

ಕಾರ್ಕಳ:ನವರಾತ್ರಿ ಬಂತೆಂದರೆ ಸಾಕು ತುಳುನಾಡಿನ ಎಲ್ಲೆಡೆ ಹುಲಿಗಳ ಅಬ್ಬರ.ಅದರಲ್ಲೂ ಕರಾವಳಿಯಲ್ಲಿ ಹುಲಿ ಕುಣಿತಕ್ಕೆ ವಿಶೇಷ ಸ್ಥಾನವಿದೆ. ಯಕ್ಷಗಾನ ಕಲೆಯಂತೆ ಹುಲಿವೇಷವೂ ಕೂಡ ಕರಾವಳಿಗರ ಅಚ್ಚುಮೆಚ್ಚಿನ ಕಲೆಯಾಗಿದೆ.ಅಬ್ಬರದ ಚಂಡೆಯ ಸದ್ದಿಗೆ ಹೆಜ್ಹೆಹಾಕುವ ವಿವಿಧ ಕಲಾತಂಡಗಳ ಹುಲಿ ವೇಷಧಾರಿಗಳು ಈ ಮೂಲಕ ದೇವರ ಸೇವೆ ಮಾಡುವುದು ಕೂಡ ನವರಾತ್ರಿ ಹುಲಿವೇಷದ ವಿಶೇಷತೆ.

ಇದೀಗ ಕಾರ್ಕಳದಲ್ಲಿ ಪ್ರಥಮ ಬಾರಿಗೆ ಬೋಳ‌ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ವತಿಯಿಂದ ಕಾರ್ಕಳ ಟೈಗರ್ಸ್ ತಂಡವು ಅ. 4 ಹಾಗೂ 5 ರಂದು ಕಾರ್ಕಳದಲ್ಲಿ ಪಿಲಿ ರಂಗ್ ದೈಸಿರ ಎನ್ನುವ ಹುಲಿ ಕುಣಿತ ವಿಭಿನ್ನ ಕಾರ್ಯಕ್ರಮ ಆಯೋಜಿಸಿದೆ.
ಹುಲಿಗಳ ಅಬ್ಬರದ ಕುಣಿತಕ್ಕೆ ಬಂಡೀಮಠದಲ್ಲಿ ಈಗಾಗಲೇ ಭವ್ಯ ವೇದಿಕೆ ನಿರ್ಮಾಣವಾಗಿದೆ.
ಅ. 4 ರಂದು ಶುಕ್ರವಾರ ಸಂಜೆ ಕಾರ್ಕಳ ಸಾಲ್ಮರದ ಇಂದ್ರಪ್ರಸ್ಥ (ಗುರುದೀಪ್ ಗಾರ್ಡನ್)ನಲ್ಲಿ ಸಂಜೆ ಗಂಟೆ 6 ರಿಂದ ಊದು ಪೂಜೆ ಆರಂಭವಾಗಲಿದೆ.
ಅ‌ 5 ರಂದು ಕಾರ್ಕಳದ ಅನಂತ ಶಯನದಿಂದ ಬಂಡಿ ಮಠದವರೆಗೆ ಶೋಭಾ ಯಾತ್ರೆ ನಡೆಯಲಿದೆ ಈ ಶೋಭ ಯಾತ್ರೆ ನಡೆಯಲಿದೆ.
ಈ ಮೆರವಣಿಗೆಯಲ್ಲಿ ಸುಮಾರು 100 ಹುಲಿ ವೇಷಧಾರಿಗಳು 2 ಟ್ರೈಲರ್ ವಾಹನದಲ್ಲಿ ಅಬ್ಬರಿಸಲಿದ್ದಾರೆ. 5 ವಾಹನಗಳಲ್ಲಿ ನವದುರ್ಗೆ, ಶಾರದಾ, ಭಾರತ ಮಾತೆ, ಶಿವಾಜಿ, ಸಾವರ್ಕರ್ ಹೀಗೆ ಹಲವಾರು ಸ್ಥಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಮೆರವಣಿಗೆ ಬಂಡಿಮಠದಲ್ಲಿ ಸಮಾಪನಗೊಳ್ಳಲಿದ್ದು ಅಲ್ಲಿ ಹುಲಿ ನೃತ್ಯ ಪ್ರದರ್ಶನಗೊಳ್ಳಲಿದೆ.
ಕಾರ್ಕಳದಲ್ಲಿ ಸಮಾಜ ಸೇವೆಯ ಧ್ಯೇಯದ ಮೂಲಕ ಮುನ್ನೆಲೆಗೆ ಬಂದ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಸಂಘಟನೆ ಕಾರ್ಕಳ ತಾಲೂಕಿನೆಲ್ಲೆಡೆ ಸಾಕಷ್ಟು ಜನಪರ ಕಾರ್ಯಕ್ರಮದ ಮೂಲಕ ಗಮನಸೆಳೆಯುತ್ತಿದೆ. ಸಮಾಜಸೇವೆಯ ಜತೆಗೆ ಹುಲಿ ಕುಣಿತ ತಂಡ ಸಿದ್ದಪಡಿಸಿದರೆ ಹೇಗೆ ಎನ್ನುವ ಚಿಂತನೆಯಲ್ಲಿ ಹುಟ್ಟಿಕೊಂಡಿದ್ದೇ ಕಾರ್ಕಳ ಟೈಗರ್ಸ್ ಎನ್ನುವ ಕಲಾತಂಡ.
ಕಳೆದ 2023ರ ಡಿಸೆಂಬರ್ 10ರಂದು ಮಕ್ಕಳಿಗೆ ಹುಲಿ ಕುಣಿತ ಕಲಿಸಬೇಕೆಂಬ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಘಟನೆ ಕಾರ್ಕಳ ಟೈಗರ್ಸ್ ಸಂಘಟನೆಯಲ್ಲಿ ನೂರಾರು ಮಕ್ಕಳು, ಯುವಕರು ತರಬೇತಿ ಪಡೆದಿದ್ದಾರೆ.
ಕಾರ್ಕಳದ ಖ್ಯಾತ ಉದ್ಯಮಿ ಬೋಳ ಪ್ರಶಾಂತ್ ಕಾಮತ್‌ ಅವರ ಅಭಿಮಾನಿಗಳು ಸೇರಿ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗವನ್ನು ಹುಟ್ಟುಹಾಕಿದ್ದರು. ಈ ಸಂಘಟನೆ
ಆರಂಭಗೊಂಡ ಕೇವಲ 10 ತಿಂಗಳಲ್ಲಿ ಸುಮಾರು 75ಕ್ಕೂ ಮಿಕ್ಕಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ ಹೆಗ್ಗಳಿಕೆ ಈ ಸಂಘಟನೆಯದ್ದು. ವಿದ್ಯಾರ್ಥಿಗಳಿಗೆ ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಕಾರ, ಸಂಸ್ಕ್ರತಿ ಉಳಿಸುವ ನಿಟ್ಟಿನಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಈ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ.
ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ನೀಡುವುದು ಕೂಡ ಸಂಘಟನೆಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *