
ಕಾರ್ಕಳ, ಮೇ.30:ಕಾರ್ಕಳ ತಾಲೂಕಿನ ಮುಂಡ್ಕೂರು ಜಾರಿಗೆಕಟ್ಟೆಯ ವ್ಯಕ್ತಿಯೊಬ್ಬರು ಶಾಂಭವಿ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೂಲತಃ ಮೈಸೂರು ಪಿರಿಯಾಪಟ್ಟಣದ ಇಷಾನ್ ಪಾಷಾ(40)ಎಂಬವರು ತಮ್ಮ ಮೊದಲ ಪತ್ನಿ ಮೃತಪಟ್ಟ ಬಳಿಕ 7 ತಿಂಗಳ ಹಿಂದೆ ಶಮೀನ್ ಎಂಬವರನ್ನು ಮದುವೆಯಾಗಿ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಸಂತೋಷ ಶೆಟ್ಟಿ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೇಸ್ರ್ರಿ ಕೆಲಸ ಮಾಡುತ್ತಿದ್ದ ಇಷಾನ್ ಪಾಷಾ ಮದ್ಯಪಾನದ ಚಟವನ್ನೂ ಹೊಂದಿದ್ದು ಆಗಾಗ ಪತ್ನಿ ಜಗಳವಾಡುತ್ತಿದ್ದರು. ಮೇ.25 ರಂದು ತಂಗಿ ಮನೆಗೆ ಹೋಗಿ ಬಂದ ಬಳಿಕ ಪತ್ನಿಯ ಬಳಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ನಾಪತ್ತೆಯಾಗಿದ್ದು, ಅವರ ಮೃತದೇಹ ಮೇ.28ರಂದು ಅವರ ಮನೆಯ ಬಳಿಯ ಶಾಂಭವಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಥವಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
