
ಕಾರ್ಕಳ, ಮೇ.29: ನಗರದ ಅನಂತಶಯನ ವೃತ್ತದ ಬಳಿಯ ರಸ್ತೆಯ ಪಕ್ಕದಲ್ಲೇ ಅಪಾಯಕಾರಿ ಗುಂಡಿಯೊAದು ಜನರ ಜೀವ ಬಲಿ ಪಡೆಯಲು ಕಾಯುತ್ತಿದ್ದು, ಸ್ಥಳೀಯ ಪುರಸಭೆಯ ನಿರ್ಲಕ್ಷö್ಯ ಖಂಡಿಸಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾವ್ ಹೊಂಡದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಅನಂತಶಯನ ವೃತ್ತದಿಂದ ದಾನಶಾಲೆ ಮಾರ್ಗವಾಗಿ ಸಾಗುವ ರಸ್ತೆಯ ಪಕ್ಕದಲ್ಲೇ ಬೃಹತ್ ಗುಂಡಿ ಬಾಯಿತೆರೆದು ನಿಂತಿದೆ. ಕಾಂಕ್ರೀಟ್ ರಿಂಗ್ ಹಾಕಿ ಚೇಂಬರ್ ನಿರ್ಮಾಣ ಮಾಡಿದ್ದು, ಅದರ ಮುಚ್ಚಳ ಕಿತ್ತುಹೋಗಿ ಕಬ್ಬಿಣದ ರಾಡ್ಗಳು ಹೊರಚಾಚಿ ಅಪಾಯ ಆಹ್ವಾನಿಸುವಂತಿತ್ತು. ಅದರ ಮೇಲ್ಭಾಗದ ಮುಚ್ಚಳ ತೆರೆದುಕೊಂಡು ಬಾವಿಯಂತಾಗಿತ್ತು. ಮಳೆಗಾಲ ಆರಂಭವಾಗಿರುವುದರಿAದ ಯಾವುದೇ ಕ್ಷಣದಲ್ಲೂ ಇಲ್ಲಿ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಯಿತ್ತು.
ಇಂಟರ್ನೆಟ್ ಜಾಲಕ್ಕಾಗಿ ಏರ್ಟೆಲ್ ಟೆಲಿಕಾಂ ಕಂಪೆನಿಯು ಓಎಫ್ಸಿ ಕೇಬಲ್ ಅಳವಡಿಸಿದ್ದು, ಇದಕ್ಕಾಗಿ ಜಂಕ್ಷನ್ ನಿರ್ಮಿಸಲಾಗಿದ್ದು ಇದಕ್ಕಾಗಿ ರಸ್ತೆಗೆ ತಾಗಿಕೊಂಡೇ ಕಾಂಕ್ರೀಟ್ ಚೇಂಬರ್ ನಿರ್ಮಿಸಲಾಗಿದೆ. ಇದರ ಮೇಲೆ ವಾಹನಗಳ ಓಡಾಟದಿಂದ ಮೇಲ್ಭಾಗದ ಮುಚ್ಚಳ ತುಂಡಾಗಿ ಕಬ್ಬಿಣದ ರಾಡ್ಗಳು ಮೇಲಕ್ಕೆದ್ದು ವಾಹನ ಸವಾರರಿಗೆ ಹಾಗೂ ನಡೆದಾಡುವವರಿಗೆ ಆಪಾಯಕಾರಿಯಾಗಿ ಪರಿಣಮಿಸಿದೆ.
ಪ್ರಮುಖವಾಗಿ ಮಳೆಗಾಲದಲ್ಲಿ ಕಭ್ಬಿಣದ ಸರಳುಗಳಿರುವ ಈ ಹೊಂಡದಲ್ಲಿ ನೀರು ತುಂಬಿದಾಗ ವಾಹನ ಸವಾರರಿಗೆ ಹಾಗೂ ಓಡಾಡುವವರ ಪ್ರಾಣಕ್ಕೆ ಸಂಚಕಾರ ಬರುವ ಅಪಾಯ ಎದುರಾಗಿದೆ. ಇದನ್ನು ಮನಗಂಡ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾವ್ ಮರಣಗುಂಡಿಯನ್ನು ದುರಸ್ತಿಗೊಳಿಸುವಂತೆ ಪುರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ. ಮಳೆಗಾಲದಲ್ಲಿ ನೀರು ತುಂಬಿ ಅಪಾಯ ಎದುರಾಗುವ ಸಾಧ್ಯತೆ ಹಿನ್ನಲೆಯಲ್ಲಿ ಪ್ರಕಾಶ್ ರಾವ್ ಶುಕ್ರವಾರ ಬೆಳಗ್ಗೆ ಏಕಾಂಗಿಯಾಗಿ ಚೇಂಬರ್ ಪಕ್ಕದಲ್ಲಿ ಕುಳಿತು ಗಾಳ ಹಾಕಿ ಹೊಂಡದಲ್ಲಿ ಮೀನು ಹಿಡಿಯುವ ವಿನೂತನ ಪ್ರತಿಭಟನೆಯ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ಮುಂದಾದರು. ಇವರ ಪ್ರತಿಭಟನೆಗೆ ಜನ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಪೊಲೀರು ಬ್ಯಾರಿಕೇಡ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಇತ್ತ ಪ್ರತಿಭಟನೆಯ ಕಾವು ಜೋರಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಸುಳಿಯಲೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಪ್ರಕಾಶ್ ರಾವ್ ಬಿಗಿಪಟ್ಟು ಹಿಡಿದ ಹಿನ್ನಲೆಯಲ್ಲಿ ಈ ವಿಚಾರ ಸಾಕಷ್ಟು ವೈರಲ್ ಆಗಿತ್ತು. ಕೊನೆಗೆ ಏರ್ ಟೆಲ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ತೆರೆದಿದ್ದ ಚೇಂಬರ್ ಮುಚ್ಚುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
