ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; 3 ಗಂಟೆ ಆಕಾಶದಲ್ಲಿ ಗಿರಕಿ ಹೊಡೆದು ಎಮರ್ಜೆನ್ಸಿ ಲ್ಯಾಂಡಿಂಗ್
ಚೆನ್ನೈ : ತಿರುಚಿರಾಪಳ್ಳಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ದಿಢೀರ್ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ತುರ್ತು ಲ್ಯಾಂಡಿAಗ್ ಮಾಡಲಾಗಿದೆ. ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವ ಮುನ್ನ ಸುಮಾರು ಎರಡು ಗಂಟೆಗಳ ಕಾಲ ತಮಿಳುನಾಡಿನ ತಿರುಚ್ಚಿ ನಗರದ ಮೇಲೆ ಈ…
ಶಾರದಾ ಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ: ಉಡುಪಿ ಜಿಲ್ಲೆಯ ಹಲವೆಡೆ ಅ. 12 ಹಾಗೂ 14 ರಂದು ಮದ್ಯ ಮಾರಾಟ ನಿಷೇಧ
ಉಡುಪಿ: ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಹಲವೆಡೆಗಳಲ್ಲಿ ಅಕ್ಟೋಬರ್ 12 ಹಾಗೂ 14 ರಂದು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅ.12ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ…
ಚಾಮುಂಡಿ ದೇವಿಯಿಂದಲೇ ಭ್ರಷ್ಟ ಸರ್ಕಾರದ ಸಂಹಾರವಾಗಲಿದೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು
ಕಾರ್ಕಳ: ಚಾಮುಂಡಿ ದೇವಿಯ ಅಸ್ತಿತ್ವವನ್ನೇ ಪ್ರಶ್ನಿಸಿ, ಮಹಿಷ ದಸರಾ ಆಚರಣೆ ಮಾಡಿದವರು ಇದೀಗ ಚಾಮುಂಡಿ ದೇವಿಯ ಜಪ ಮಾಡುತ್ತಿದ್ದಾರೆ. ಚಾಮುಂಡಿ ದೇವಿಯಿಂದಲೇ ರಾಜ್ಯದ ಭ್ರಷ್ಟ ಸರ್ಕಾರ ಸಂಹಾರವಾಗಲಿದೆ. ಸರ್ಕಾರವನ್ನು ವಾಮಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸಲು ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ದೇವಿಯು…
ಟಾಟಾ ಗ್ರೂಪ್ಗೆ ಮುಂದಿನ ವಾರಸುದಾರರಾಗಿ ನೋಯಲ್ ಟಾಟಾ ನೇಮಕ: ಟ್ರಸ್ಟ್ ಗಳ ಮಂಡಳಿ ಸಭೆಯಲ್ಲಿ ಒಮ್ಮತದ ನಿರ್ಧಾರ
ಮುಂಬೈ: ಟಾಟಾ ಗ್ರೂಪ್ಗೆ ಹೊಸ ವಾರಸುದಾರರಾಗಿ ಟಾಟಾ ಟ್ರಸ್ಟ್ ಗಳ ಮುಖ್ಯಸ್ಥರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಇಂದು (ಶುಕ್ರವಾರ) ಟಾಟಾ ಟ್ರಸ್ಟ್ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಒಮ್ಮತದಿಂದ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಾಟಾ…
ಕರ್ನಾಟಕದಲ್ಲಿ ಮತ್ತೆ ಮುಂದುವರಿದ ಜಾಹೀರಾತು ಸಮರ: ದಸರಾ ಶುಭಾಶಯ ನೆಪದಲ್ಲಿ ವಿಪಕ್ಷಗಳಿಗೆ ಕಾಂಗ್ರೆಸ್ ತಿರುಗೇಟು!
ಬೆಂಗಳೂರು: “ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ” ಇದು ಇಂದು ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ಪ್ರಕಟಗೊಂಡ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾಹೀರಾತು. ಈ ಮೂಲಕ ದಸರಾ ಶುಭಾಶಯ ಕೋರುವ…
ಮುಡಾ, ವಾಲ್ಮೀಕಿ ಎರಡು ಕೇಸ್ನಲ್ಲಿ ಸಿದ್ದರಾಮಯ್ಯನವರೇ ಅಪರಾಧಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮೈಸೂರು : ಮುಡಾ, ವಾಲ್ಮೀಕಿ ಎರಡು ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯನವರೇ ಅಪರಾಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಮುಡಾ, ವಾಲ್ಮೀಕಿ ಎರಡು ಕೇಸ್ನಲ್ಲಿ ಅವರೇ ಅಪರಾಧಿ.…
ಮುಂಡ್ಕೂರು : ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶಕ್ಕೆ
ಕಾರ್ಕಳ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಾಲೂಕಿನ ಮುಂಡ್ಕೂರಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ಅವರು ಅಕ್ರಮವಾಗಿ ಮರಳು ಸಾಗಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೃತ್ತದ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕತವ್ಯದಲ್ಲಿದ್ದ ವೇಳೆ ಮುಂಡ್ಕೂರು ಗ್ರಾಮದ ಮುಂಡೇಲ್…
ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಪ್ರಕರಣ: ಸಿಐಡಿ ತನಿಖೆ’ಗೆ ವಹಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಕೇಸ್ ಮತ್ತು ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಹಾಗೂ ಹಾವೇರಿ ಜಿಲ್ಲೆಯ ಮಹಿಳೆ ವಿರುದ್ದ ಶಾಸಕರು ದಾಖಲಿಸಿರುವ ಬ್ಲ್ಯಾಕ್ ಮೇಲ್ ಪ್ರಕರಣಗಳ ತನಿಖೆಯನ್ನು ರಾಜ್ಯ ಅಪರಾಧ…
ಮಂಗಳೂರು : ಬಲ್ಮಠದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಮಾರಾಮಾರಿ- ರೌಡಿಗಳಂತೆ ಪರಸ್ಪರ ಹೊಡೆದಾಡಿಕೊಂಡ ಬಸ್ ಸಿಬ್ಬಂದಿಗಳು!
ಮಂಗಳೂರು : ವಿಟ್ಲ-ಮಂಗಳೂರು ಮಧ್ಯೆ ಸಂಚರಿಸುವ ಸೆಲಿನಾ ಬಸ್ ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಧರಿತ್ರಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ…
ಅಕ್ರಮ ಪಟಾಕಿ ದಾಸ್ತಾನು ಇಟ್ಟಿದ್ದ ಮನೆಗೆ ಪೊಲೀಸರ ದಾಳಿ; 4 ಲಕ್ಷ ರೂ. ಮೌಲ್ಯದ ಪಟಾಕಿ ವಶ
ಉಡುಪಿ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಆರೋಪದಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು 4 ಲಕ್ಷ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡ ಘಟನೆ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ. ಉಪ್ಪುಂದದ ಕಂಚಿಕಾನ್ ಎಂಬಲ್ಲಿನ ದತ್ತಾತ್ರೇಯ ಶೇಟ್ ಎಂಬಾತ ಪಟಾಕಿ…
