ನಿಟ್ಟೆ: ವಿಕೋಪಕ್ಕೆ ತೆರಳಿದ ಗಂಡ ಹೆಂಡತಿ ಜಗಳ-: ಪತ್ನಿಗೆ ಕತ್ತಿಯಿಂದ ಹಲ್ಲೆಗೈದ ಭೂಪ!
ಕಾರ್ಕಳ, ಜೂ17: ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿ ಪತಿ ಪತ್ನಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಿಟ್ಟೆ ನಿವಾಸಿ ಧರ್ಮ ಅವರು ಪತ್ನಿ ಬೇಬಿ ಅವರೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದರು. ಜೂ.14 ರಂದು ಸಹ ಗಂಡ…
ಕ್ರಿಮಿನಲ್ ಕೇಸ್ ನಲ್ಲಿ ದೋಷಮುಕ್ತರಾದ ಮಾತ್ರಕ್ಕೆ ಅನುಕಂಪದ ಉದ್ಯೋಗದ ಹಕ್ಕು ಸಿಗುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು,ಜೂ.17: ಕ್ರಿಮಿನಲ್ ಪ್ರಕರಣದಲ್ಲಿ ನಿರ್ದೋಷಿ ಎಂದು ತೀರ್ಪು ಬಂದ ತಕ್ಷಣಕ್ಕೆ ಅರ್ಜಿದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯುವ ಹಕ್ಕು ಸಿಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಮಹತ್ವದ ತೀರ್ಪು ನೀಡಿದೆ. ಮೈಸೂರು ಜಿಲ್ಲೆಯ ಹುಣಸೂರು ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ…
ಕಡ್ತಲ: ಗ್ರಾಮ ಪಂಚಾಯತ್ ಮಾಜಿ ಸದಸ್ಯ ವೆಂಕಪ್ಪ ನಾಯ್ಕ್ ನಿಧನ
ಕಾರ್ಕಳ,ಜೂ. 16: ಕಡ್ತಲ ಗ್ರಾಮ ಪಂಚಾಯತ್ ಬೋರ್ಡ್, ವರಂಗ ಮಂಡಲ ಪಂಚಾಯತ್, ಕಡ್ತಲ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಡ್ತಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ, ಕಡ್ತಲ ವೆಂಕಪ್ಪ ನಾಯ್ಕ್ (86ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.…
ಕಾಂತಾವರ: ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
ಕಾರ್ಕಳ, ಜೂ16: ಮರದಿಂದ ಬಿದ್ದು ಗಾಯಗೊಂಡಿದ್ದ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ನಿವಾಸಿ ಸುನೀಲ್ ಪೂಜಾರಿ(39) ಎಂಬವರು ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಸುನಿಲ್ ಮಾ.21 ರಂದು ಕೆಲಸ ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡಿದ್ದರು. ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ…
ಕಾರ್ಕಳ: ಬೈಕಿಗೆ ಕಂಟೈನರ್ ಲಾರಿ ಡಿಕ್ಕಿ: ಸವಾರ ಆಸ್ಪತ್ರೆಗೆ ದಾಖಲು
ಕಾರ್ಕಳ, ಜೂ.16: ಕಾರ್ಕಳ ತಾಲೂಕು ಈದು ಗ್ರಾಮದ ಪೊಲೀಸ್ ಚೆಕ್ ಪೋಸ್ಟ್ ಬಳಿಯ ಒರಿಮಾರು ಕ್ರಾಸ್ ಎಂಬಲ್ಲಿ ಕಾರ್ಕಳ ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಬೈಕಿಗೆ ಕಂಟೈನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈದು…
ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಆಯ್ಕೆ ಅನಧಿಕೃತ: ದಲಿತ ಸಂಘಟನೆ ಮುಖಂಡರ ಆಕ್ಷೇಪ
ಕಾರ್ಕಳ, ಜೂ.16: ಕಾರ್ಕಳದ ಕಾಬೆಟ್ಟಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು ಇದು ನಿಯಮಬಾಹಿರವಾಗಿದ್ದು, ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ. ಮಂಗಳವಾರ ಕಾರ್ಕಳ…
ಸಾಣೂರು ರಾಜೇಶ್ವರಿ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟನೆ
ಕಾರ್ಕಳ,ಜೂ.,16: ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಡಾ. ಜೀವರಾಜ್ ಆಳ್ವಾ ವಿದ್ಯಾರ್ಥಿ ನಿಲಯದ ಉದ್ಘಾಟನೆ ಕಾರ್ಯಕ್ರಮ ಜೂ. 16 ರಂದು ನಡೆಯಿತು. ಕಾರ್ಕಳ ಜೈನಮಠದ ಸ್ವಸ್ತಿ ಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ…
ಬೈಲೂರು: ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಪ್ರಸಾದ್ ಶೆಟ್ಟಿ ಅವರಿಂದ ಉಚಿತ ಸ್ಕೂಲ್ ಬ್ಯಾಗ್ ವಿತರಣೆ
ಕಾರ್ಕಳ,ಜೂ16: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇದರ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವು ಸೋಮವಾರ ಜರುಗಿತು. ಶಾಲೆಯ ಹಿರಿಯ ವಿದ್ಯಾರ್ಥಿಯಾದ ಪ್ರಸಾದ್ ಶೆಟ್ಟಿ ಅಚ್ಚೋಟು ಅವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ…
ಕಾರ್ಕಳ: ಬೈಕಿಗೆ ಗೂಡ್ಸ್ ಡಿಕ್ಕಿ-ಸವಾರರಿಬ್ಬರಿಗೆ ಗಾಯ
ಕಾರ್ಕಳ, ಜೂ. 16: ಕಾರ್ಕಳ ಕಸಬಾ ಗ್ರಾಮದ ಪುಲ್ಕೇರಿ ಬಳಿ ಬೈಕಿಗೆ ಗೂಡ್ಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂ. 14 ರಂದು ಈ ಅಪಘಾತ ನಡೆದಿದ್ದು, ಚೇತನ್ ಎಂಬವರು ತಮ್ಮ ಬೈಕಿನಲ್ಲಿ ಸ್ನೇಹಿತ ಸಂಪತ್ ಎಂಬವರೊಂದಿಗೆ ಮೂಡಬಿದ್ರೆಯಿಂದ…
ಕಾರ್ಕಳ: ಜಮೀಯ್ಯತುಲ್ ಫಲಾಹ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಬುಕ್, ಕೊಡೆ ವಿತರಣೆ
ಕಾರ್ಕಳ,ಜೂ.16 :ಜಮೀಯ್ಯತುಲ್ ಫಲಾಹ್ ಕಾರ್ಕಳ ಘಟಕ ವತಿಯಿಂದ ಕಾರ್ಕಳ ಸಾಲ್ಮರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ನೋಟ್ ಪುಸ್ತಕ , ಶಾಲಾ ಬ್ಯಾಗ್, ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುಸ್ತಕ ಕೊಡೆಗಳನ್ನು ವಿತರಿಸಿ ಉಡುಪಿ ದಕ್ಷಿಣ…
