Share this news

ಕಾರ್ಕಳ: ಅಯೋಧ್ಯಾ ಶ್ರೀ ರಾಮ ದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಎರಡನೇ ವರ್ಷದ ಸವಿನೆನಪಿಗಾಗಿ ಬಜಗೋಳಿಯ ದಿಡಿಂಬಿರಿ ಅಯ್ಯಪ್ಪ ಮಂದಿರದಲ್ಲಿ ಇಂದು (ಜ 22) ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀರಾಮ ತಾರಕ ಜಪಯಜ್ಞ ನಡೆಯಲಿದೆ.
ಸಮಸ್ತ ಹಿಂದೂ ಬಾಂಧವರು ಜಾತಿ ಮತ ಭೇದವಿಲ್ಲದೇ ಹಿಂದೂಗಳೆಲ್ಲರೂ ಸಮಾನತೆ ಯಿಂದ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ ಕಲ್ಪಿಸಲಾಗಿದೆ.ಸಂಜೆ ಅಯೋಧ್ಯೆಯ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಮಾಡಲು ಅವಕಾಶವಿದೆ.

ಸಂಜೆ 6.30ಕ್ಕೆ ಗಂಟೆಗೆ ಧಾರ್ಮಿಕ ಚಿಂತಕರಾದ ಬಾರ್ಕೂರು ದಾಮೋದರ ಶರ್ಮಾರವರಿಂದ ಧಾರ್ಮಿಕ ಉಪನ್ಯಾಸ ಮತ್ತು ಕಲ್ಲಡ್ಕ ವಿಠ್ಠಲ್ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಶ್ರೀ ರಾಮ ತಾರಕ ಯಜ್ಞ ಸಮಿತಿಯ ಪ್ರಕಟಣೆ ತಿಳಿಸಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *