
ಕಾರ್ಕಳ,ಜೂ.22: ಯೋಗದಿಂದ ರೋಗ ಬರದ ಹಾಗೆ ತಡೆಗಟ್ಟಬಹುದು. ಯೋಗಾಭ್ಯಾಸವನ್ನು ಪ್ರತಿದಿನವೂ ನಡೆಸುವುದರಿಂದ ಕಾಯಿಲೆಗಳಿಂದ ದೂರವಿರಬಹುದು.
ಎಂದು ಕಾರ್ಕಳದ ಪತಂಜಲಿ ಯೋಗ ಸಮತಿಯ ಯೋಗ ತರಬೇತುದಾರರಾದ ಉದಯ ಕುಮಾರ್ ಕಡಂಬ ಹೇಳಿದರು. ಅವರು ಭಾನುವಾರ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾರ್ಕಳದ ಕೆ.ಎಂ. ಇ.ಎಸ್.ಸಂಸ್ಥೆಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ತರಬೇತಿಯನ್ನು ನೀಡಿ ಮಾತನಾಡಿ, ಯೋಗ ದಿನಾಚರಣೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಲಿದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಯೋಗಾಭ್ಯಾಸದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಹಿತಮಿತವಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂದು ಮಾಹಿತಿ ನೀಡಿದರು.
ಪ್ರೈಮರಿ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ರ ಸ್ವಾಗತಿಸಿ,
ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಧನ್ಯವಾದವಿತ್ತರು.
ಸುಮಾರು ಒಂದು ಗಂಟೆಗಿಂತಲೂ ಹೆಚ್ಚಿನ ಸಮಯ ಯೋಗ ತರಬೇತಿಯನ್ನು ನೀಡಲಾಯಿತು.



.
.
.
.
.
.
.
.
.
.
.
.
.
.
.
.
.
.
.
.
