Share this news

ಬೆAಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆತೊಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಯಲ್ಲಿ ಪ್ರಕಟಿಸಿದ್ದು ಕಾರ್ಯಕರ್ತೆಯರು ಮತ್ತು ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು ಕುರಿತಂತೆ ನೂತನ ಮಾರ್ಗಸೂಚಿಯಲ್ಲಿ ಶಿಕ್ಷಣ ಇಲಾಖೆ ಈ ನಿಯಮವನ್ನು ಆದೇಶಿಸಿದೆ.

ಬಿಸಿಯೂಟ ತಯಾರು ಮಾಡುವ ಅಡುಗೆ ಸಿಬ್ಬಂದಿ ಬಹುತೇಕ ಮಹಿಳೆಯರಿದ್ದು ಹೆಚ್ಚಿನ ಎಲ್ಲರೂ ಬಳೆ ಮತ್ತು ಬಿಂದಿಗೆ ಧರಿಸುತ್ತಾರೆ. ಮಕ್ಕಳ ಮೇಲೆ ಕಾಳಜಿ ಇದ್ದಿದ್ದರೆ ಈ ನಿಯಮ ಹಿಂದೆಯೇ ಮಾಡಬೇಕಿತ್ತು. ಅಷ್ಟಕ್ಕೂ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಟ್ಟು ಅವರು ಮಾಡುವ ಅಡುಗೆ ಸುರಕ್ಷತೆ, ಗುಣಮ್ಟಟದಲ್ಲಿಲ್ಲವಾ? ಶಿಕ್ಷಣ ಇಲಾಖೆ ಮೂಲಕ ಮೂಲಕ ಹಿಂದು ಧಾರ್ಮಿಕ ಸ್ವಾತಂತ್ರ‍್ಯ ಹತ್ತಿಕ್ಕುವ ನಿಯಮ ರೂಪಿಸಿರುವುದು ಉದ್ದೇಶ ಪೂರ್ವಕವಾಗಿದೆ. ಇದು ಸರ್ಕಾರದಿಂದ ನಡೆಯುತ್ತಿರುವ ದ್ವೇಷ ರಾಜಕಾರಣ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮಹಿಳೆಯರು ತೊಡುವ ಬಳೆಯಿಂದ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ಸರ್ಕಾರ ಈ ರೀತಿ ಆದೇಶ ಹೊರಡಿಸಿದೆ. ಈ ಕೂಡಲೇ ಆದೇಶ ವಾಪಸ್ಸು ಪಡೆಯಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹಿಂದು ಜನಜಾಗೃತಿ ಸಮಿತಿ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *