Share this news

ಕಾರ್ಕಳ; ಅಭಿವೃದ್ದೀ ಸಹಿಸದೇ ಗುಂಪುಗಾರಿಕೆ ಮಾಡುತ್ತಿರುವ ವಿರೋಧಿಗಳಿಗೆ ಮುಂದಿನ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.


ಅವರು ಶನಿವಾರ ವಿಕಾಸ ಕಚೇರಿಯಲ್ಲಿ ಪಳ್ಳಿ ನಿಂಜೂರಿನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಪಕ್ಷದ ಧ್ವಜ ನೀಡಿ ಮಾತನಾಡಿದರು. ಕಾರ್ಕಳದ ಸಮಗ್ರ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ, ನನ್ನ ಏಳಿಗೆ ಸಹಿಸದ ವಿರೋಧಿಗಳಿಗೆ ಅಭಿವೃದ್ಧಿಯ ಮೂಲಕವೇ ಉತ್ತರ ನೀಡುತ್ತೇನೆ,ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳಲಿದ್ದು, ನನ್ನ ಕಾರ್ಯಕರ್ತರ ಶಕ್ತಿ ಏನು ಎನ್ನುವುದನ್ನು ಮುಂದಿನ ಚುನಾವಣೆಯಲ್ಲಿ ತಿಳಿಯಲಿದೆ ಎಂದು ಗುಡುಗಿದರು.


ಕಾಂಗ್ರೆಸ್ ಬೆಂಬಲಿತ ಪಂಚಾಯಿತಿ ಸದಸ್ಯ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ಜೆನೆಟ್ ಮಾರ್ಟಿಸ್, ದಿಲೀಪ್ ಪಟೇಲ್, ಗೋವಿಂದ ಜೋಗಿ,ಮನ್ಮಥ ಶೆಟ್ಟಿ, ಮಲ್ಲಿಕಾ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ದ.ಕ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಜಯರಾಮ ಸಾಲ್ಯಾನ್, ರವೀಂದ್ರ ಮಡಿವಾಳ, ಅಂತೋನಿ ಡಿಸೋಜ, ನವೀನ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *