

ಕಾರ್ಕಳ,ಅ.15: ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು.ಯಾವುದೇ ಕ್ಷೇತ್ರದಲ್ಲಿ ತಾವು ಯಶಸ್ವಿಯಾಗಬೇಕಾದರೆ ಪೂರ್ವಸಿದ್ಧತೆ ಎಂಬುದು ಬಹಳ ಮುಖ್ಯ.ಈ ವಿಚಾರವನ್ನು ಇಂದಿನ ಯುವಕರು ಅರ್ಥಮಾಡಿಕೊಳ್ಳಬೇಕು.ಆ ಮೂಲಕ ರಾಷ್ಟ್ರದುನ್ನತಿಗೆ, ನಾಡ ಏಳಿಗೆಗೆ ಬದ್ಧರಾಗ ಬೇಕು ಎಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಹೇಳಿದರು.
ಅವರು ತಾಲೂಕು ಸಾಕ್ಷರತ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ ನಡೆದ ತಾಲೂಕು ಯುವಸಂಸತ್ತು ಸಭೆ-2026ರ ಕಾರ್ಯಕ್ರಮವನ್ನು ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾರಾಯಣಗುರುಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಮಾತನಾಡಿ, ನಮ್ಮ ದೇಶದ ಪರಂಪರೆಯನ್ನು ಗೌರವಿಸಿಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು ದೇಶ, ರಾಜ್ಯ ಪ್ರಜ್ವಲಿಸುವಂತೆ ಇಂದಿನ ಯುವಜನತೆ ಸಂಕಲ್ಪತೊಡಬೇಕು ಎಂದು ಕರೆಕೊಟ್ಟರು.
ವೇದಿಕೆಯಲಿ ್ಲಹೆಬ್ರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಂಕರ್ ಶೇರಿಗಾರ್, ಹೆಬ್ರಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಿನೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬಿ ನಾಯ್ಕ್, ಕಾರ್ಕಳ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನವೀನ್ಚಂದ್ರ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕುಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಿರಿಜಮ್ಮ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಶ್ರೀಮತಿ ಇಂದಿರಾ ವಂದಿಸಿ, ಸ.ಪ.ಪೂರ್ವ ಕಾಲೇಜು ಹೆಬ್ರಿಯ ಉಪನ್ಯಾಸಕ ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಣಕು ಯುವ ಸಂಸತ್ ಸಭೆ ಸ್ಪರ್ಧೆ :ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಅಣಕು ಸಂಸತ್ತು ಸಭಾ ಸ್ಪರ್ಧೆ ನಡೆಯಿತು. ತೀರ್ಪಗಾರರಾಗಿ,ಉಪನ್ಯಾಸಕರಾದ ಪ್ರಮೋದ್ ನಾಯ್ಕ್, ಜಗದೀಶ್ ನಾಯಕ್, ಶ್ರೀಮತಿ ಬಬಿತಾ ಪ್ರಸಾದ್ ಹಾಗೂ ವಕೀಲರಾದ ಲೋಲಾಕ್ಷ ಸಹಕರಿಸಿದರು.






.
.
.
.
.
.
.
.
.
.
.
.
.
.
.
.
.
.
.
.
