Share this news

ಕಾರ್ಕಳ: ಹಿಂದೂ ಧರ್ಮದ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಅವಹೇಳನ ಮಾಡಿ ಧಾರ್ಮಿಕ ನಂಬಿಕೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊAಡು ಆಕೆಗೆ ನ್ಯಾಯ ಕೊಡಿಸದಬೇಕು ಎಂಬ ನೆಪದಲ್ಲಿ ಧರ್ಮಸ್ಥಳದ ಮೇಲೆ ದಾಳಿ ನಡೆಸುವ ಮೂಲಕ ಹಿಂದೂ ಧರ್ಮವನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು  ಧರ್ಮಸ್ಥಳ ಜನಜಾಗೃತಿ ವೇದಿಕೆಯ ವತಿಯಿಂದ ಭಾನುವಾರ ಕಾರ್ಕಳದಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿ, ಧಾರ್ಮಿಕ ಕೇಂದ್ರಗಳ ಮೇಲೆ ಹತ್ತಾರು ಬಾರಿ ಸುಳ್ಳನ್ನೇ ಹೇಳಿಕೊಂಡು ಸುಳ್ಳನ್ನೇ ಸತ್ಯವಾಗಿಸುವ ಸಂಚಿನ ಕುರಿತು ಜನರು ಎಚ್ಚೆತ್ತುಕೊಳ್ಳಬೇಕು. ಸೌಜನ್ಯ ಪ್ರಕರಣದ ಆರೋಪಿಗಳು ಯಾರೇ ಇರಲಿ ಎಷ್ಟೇ ಪ್ರಭಾವಿಗಳೇ ಇರಲಿ ಅವರಿಗೆ ಶಿಕ್ಷೆಯಾಗಲೇಬೇಕು ಇದರಲ್ಲಿ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟ ನಡೆಸುವವರಿಗೆ ಕಾನೂನಿನ ಮೇಲೆ ನಂಬಿಕೆಯಿಲ್ಲ
ಇವರ ಗುರಿ ಕೇವಲ ಧರ್ಮಸ್ಥಳ ಮಾತ್ರ ಹೊರತು ಸೌಜನ್ಯ ವಿಚಾರ ಕೇವಲ ನೆಪ ಮಾತ್ರ ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.
ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳಕ್ಕೆ ಮುನಿ,ಮಠಾಧೀಶರ ಆಶೀರ್ವಾದವಿದೆ, ಇಂತಹ ಧರ್ಮ ಹಾಗೂ ದಾರ್ಶನಿಕರ ಕ್ಷೇತ್ರ ಧರ್ಮಸ್ಥಳವಾಗಿದೆ. ಈ ದೇವಸ್ಥಾನ ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೇ ಸರ್ವಧರ್ಮಗಳಿಗೂ ನ್ಯಾಯ ಒದಗಿಸುವ ಪುಣ್ಯಕ್ಷೇತ್ರವಾಗಿದೆ.ಸತ್ಯದ ನಾಡಿನಲ್ಲಿ ಅಧರ್ಮ ತಾಂಡವವಾಡುವುದಿಲ್ಲ. ದೈವೀ ಸಂಪತ್ತುವುಳ್ಳವರನ್ನು ನಿಂದಿಸಬೇಡಿ, ನಿಮ್ಮ ಮನಸ್ಸಿನ ಕೊಳೆಯನ್ನು ಶುದ್ದಗೊಳಿಸಬೇಕಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ, ಒಬ್ಬ ಧರ್ಮಕ್ಷೇತ್ರದ ಪರಿಪಾಲಕನಿಗೆ,ಸಮಾಜಸೇವಕನಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ, ನಾವು ಸಮಾನಮನಸ್ಕರು ಧರ್ಮಾಧಿಕಾರಿಗಳಿಗೆ ಆಗುವ ಅವಹೇಳನದ ವಿರುದ್ದ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಪೊಲೀಸ್,ನ್ಯಾಯಾಂಗ ವ್ಯವಸ್ಥೆಗೆ ಸೋಲಾಗಿರಬಹುದು, ಆದರೆ ಧರ್ಮಕ್ಕೆ ಸೋಲಾಗದು, ಆಕೆಯ ಕೊಲೆಯಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಅವರಿಗೆ ಮಂಜುನಾಥ ಶಿಕ್ಷೆ ಕೊಡುತ್ತಾನೆ ಎಂದರು.

ಅಶೋಕ್ ಭಟ್ ಉಜಿರೆ ಮಾತನಾಡಿ, ಹಿಂದೂ ಎನ್ನುವುದು ಧರ್ಮವೃಕ್ಷದ ತಾಯಿಬೇರು ಅದು ಕೊಳೆಗಳನ್ನು ಸ್ವೀಕರಿಸಿ ಸಹಿಯನ್ನು ನೀಡುತ್ತದೆ.ಹಿಂದೂ ಧರ್ಮ ನಮ್ಮ ಆಸ್ತಿಕತೆ ಹಾಗೂ ಜೀವನಪದ್ದತಿಯಾಗಿದೆ ಹಾಗಾಗಿ ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಿದೆ.ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ದುರ್ಜನರು ಧರ್ಮಸ್ಥಳದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ,ಗುರುಪುರ ವಜ್ರದೇಹಿ ಮಠದ
ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ,ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ರಾಮ್ ಭಟ್,
ಕಾರಿಂಜ ಮಠದ ಮುಕ್ತಾನಂದ ಸ್ವಾಮೀಜಿ, ಜಂಗಮ ಸಂಸ್ಥಾನ ಮಠದ ರುದ್ರಮಣಿ ಮಹಾಸ್ವಾಮಿ,ನ್ಯಾಯವಾದಿ ಅರುಣ್ ಬಂಗೇರ, ಎಂ ಕೆ ವಿಜಯಕುಮಾರ್, ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಸುಧಾಕರ ಶೆಟ್ಟಿ, ಸಹನಾ ಕುಂದರ್ ಮುಂತಾದವರು ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *