Share this news

ಹೆಬ್ರಿ: ಅಕ್ರಮವಾಗಿ ದನ ಸಾಗಾಟ ಮಡುತ್ತಿದ್ದ ವಾಹನ ಹಾಗೂ ಜಾನುವರುಗಳನ್ನು ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಡ್ಪಾಲು ಗ್ರಾಮದ ಕೂಡ್ಲು ಸಮೀಪದ ಮೇಗದ್ದೆ ಎಂಬಲ್ಲಿAದ ನವೆಂಬರ್ 18ರ ಶನಿವಾರ ಮುಂಜಾನೆ 3 ಗಂಟೆಗೆ 17 ಜಾನುವಾರುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಲು ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊAಡು ನಾಡ್ಪಾಲು ಗ್ರಾಮದ ಬೆಳಾರ್ ಎಂಬಲ್ಲಿ ಬರುತ್ತಿದ್ದಾಗ ರಾತ್ರಿ ರೌಂಡ್ಸ್ ನಲ್ಲಿದ್ದ ಹೆಬ್ರಿ ಎಸ್ ಯ ಮಹಾಂತೇಶ್ ಹಾಗೂ ಅವರ ತಂಡ ತಡೆಯಲು ಮುಂದಾಗಿದ್ದಾರೆ. ದನ ಸಾಗಾಟ ವಾಹನದ ಮುಂದಿನಿAದ ಪೊಲೀಸರ ಕುರಿತು ಮಾಹಿತಿ ನೀಡುವ ಸಲುವಾಗಿ ಆರೋಪಿಗಳಾದ ಆರೀಫ್ ಹಾಗೂ ಮೊಹಮ್ಮದ್ ಮುಜಾಮಿಲ್ ಎಂಬವರು ಸ್ಕೂಟರಿನಲ್ಲಿ ಎಸ್ಕಾರ್ಟ್ ಮಾಡಿಕೊಂಡು ಬರುತ್ತಿದ್ದಾಗ ಬೆಳಾರ್ ಎಂಬಲ್ಲಿ ಪೊಲೀಸರನ್ನು ಕಂಡು ಗೂಡ್ಸ್ ವಾಹನದಲ್ಲಿದ್ದ ಆರೀಶ್, ಹಸನಬ್ಬ ಹಾಗೂ ರಫೀದ್ ಸಫಾನ್ ಟೆಂಪೋ ಬಿಟ್ಟು ಪರಾರಿಯಾಗಿದ್ದಾರೆ.
ಗೂಡ್ಸ್ ವಾಹನದಲ್ಲಿದ್ದ 17 ಜಾನುವಾರುಗಳ ಪೈಕಿ ಒಂದು ಮೃತಪಟ್ಟಿದ್ದರು, ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳ ಹಾಗೂ ಮಂಗಳೂರಿನಲ್ಲಿ ದನದ ಮಾಂಸಕ್ಕೆ ಭಾರೀ ಬೇಡಿಕೆಯಿರುವ ಹಿನ್ನಲೆಯಲ್ಲಿ ಅಕ್ರಮ ಗೋಸಾಗಾಟ ನಿರಂತರವಾಗಿ ನಡೆಯುತ್ತಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ವಧಿಸಿ ಮಾಂಸ ಮಡಿದಾಗ ಮಾರುಕಟ್ಟೆಯಲ್ಲಿ ಸುಮಾರು 3 ಲಕ್ಷ ರೂ ಮಿಕ್ಕಿ ಮೌಲ್ಯ ಇದೆ ಎನ್ನಲಾಗುತ್ತಿದೆ

Leave a Reply

Your email address will not be published. Required fields are marked *