
ಕಾರ್ಕಳ, ಜೂ.28: ಜೆಸಿಐ ಕಾರ್ಕಳ ರೂರಲ್ ನ ಜೂನಿಯರ್ ಜೇಸಿ ವತಿಯಿಂದ ಕಾರ್ಕಳ ನಗರ ಠಾಣೆಯ ಸಹಯೋಗದೊಂದಿಗೆ ಕಾರ್ಕಳ SVT ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ದ್ರವ್ಯದ ಕುರಿತು ಜಾಗೃತಿ ಮೂಡಿಸುವ ನಶಾ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಕಳ ನಗರ ಠಾಣೆಯ ಪಿಎಸ್ಐ ಶಿವಕುಮಾರ್ ಮಾತನಾಡಿ ಸ್ವಸ್ಥ , ನಾಗರಿಕ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯ ಪಾತ್ರ ಮತ್ತು ವ್ಯಸನ ಮುಕ್ತ ಸಮಾಜ ಹಾಗೂ ಅದರ ರಕ್ಷಣೆಗಾಗಿ ಪೊಲೀಸ್ ಇಲಾಖೆ ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸಿ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು. ಜೂನಿಯರ್ ಜೇಸಿ ಅಧ್ಯಕ್ಷೆ ದಿಯಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜೆ ಸಿ ಐ ರೂರಲ್ ನ ಅಧ್ಯಕ್ಷರಾದ ಜೆಸಿ ಸೃಜನ್ ಪೂಜಾರಿ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಶೆಣೈ, ಪೂರ್ವಾಧ್ಯಕ್ಷರಾದ ವೀಣಾ ರಾಜೇಶ್, ಶೋಭಾ ಭಾಸ್ಕರ್, ಬೀಟ್ ಪೊಲೀಸ್ ಉಮೇಶ ನಾಯಕ್, ಮುಖ್ಯ ಶಿಕ್ಷಕಿ ಮಾಲಿನಿ ಕೆ ಉಪಸ್ಥಿತರಿದ್ದರು. ಸುಮಾರು 300 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



.
.
.
.
.
.
.
.
.
.
.
.
.
.
.
.
.
.
.
.
