
ಹೆಬ್ರಿ,ಜೂ. 29 : ಕಲಿಕೆಯಲ್ಲಿ ಬುದ್ಧಿವಂತರಾದವರು ಸರಕಾರಿ ನೌಕರಿ ಸಹಿತ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.ವಿದ್ಯಾರ್ಥಿಗಳ ಕಲಿಕಾ ಮಟ್ಟದ ಮೇಲೆಯೇ ಅವರ ಮುಂದಿನ ವೃತ ಜೀವನದ ಮಟ್ಟ ನಿರ್ಧಾರವಾಗುತ್ತದೆ ಎಂದು ಮುದ್ರಾಡಿ MNDSM ಪ್ರೌಢಶಾಲಾ ಪೂರ್ವ ವಿದ್ಯಾರ್ಥಿ ಜಯಂತ ಎಸ್.ಪಿ ಹೇಳಿದರು.
ಅವರು ಮುದ್ರಾಡಿಯ MNDSM ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 2006-07ನೇ ಹಳೆ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮಗೆ ಬೇಕಾದ್ದನ್ನು ಪಡೆದುಕೊಳ್ಳಬೇಕಾದರೆ ಬಾಲ್ಯದಲ್ಲಿಯೇ ಉತ್ತಮ ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಪಡಬೇಕು.ಹಾಗಾಗಿ ಭವ್ಯ ಭವಿತವ್ಯಕ್ಕೆ ಸೋಪಾನವಾಗಿರುವ ಪ್ರೌಢಶಾಲಾ ಹಂತದಲ್ಲಿನ ವಿದ್ಯಾರ್ಥಿ ಜೀವನವು ಜೀವನದ ದಿಕ್ಕನ್ನು ಬದಲಾಯಿಸುವ ಕಾಲಘಟ್ಟ . ಇಲ್ಲಿನ ಹದಿಹರೆಯದ ಬದುಕು ಹುಚ್ಚುಕೋಡಿಯಾಗಿರದೇ, ಕಣ್ಣಪಟ್ಟಿ ಕಟ್ಟಿಕೊಂಡ ಕುದುರೆಯಂತಿರಬೇಕು.ಯಕ್ಷಗಾನ, ನಾಟಕ, ನೃತ್ಯ, ಭರತನಾಟ್ಯದಂತಹ ಪಠ್ಯ ಪೂರಕ ಚಟುವಟಿಕೆಗಳಲ್ಲಿ ತೊಡಗಿ, ಶಿಕ್ಷಕರು ಹೇಳಿದ್ದನ್ನು ಗಮನವಿಟ್ಟು ಕೇಳಿ ಶಿಕ್ಷಣದಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಅವಿನಾಶ್ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ಭರಾಟೆಯ ನಡುವೆಯೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ನಾವು ಕಲಿತ ಶಾಲೆಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.ಇದರ ಹಿಂದೆ ಇಲ್ಲಿನ ಶಿಕ್ಷಕರ ಅಪಾರ ಪರಿಶ್ರಮವಿದೆ.ಅದನ್ನು ನಾವು ಎಂದಿಗೂ ಮರೆಯಬಾರದು.ಇಂದು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ದಂತಹ ಸೇವೆಗಳ ಲಭ್ಯತೆಯಿದೆ. ಚಾಟ್ ಜಿಪಿಟಿ, ಎಐ ಗಳಂತಹ ಹೊಸ ತಂತ್ರಜ್ಞಾನಗಳು ಮಕ್ಕಳು ಇನ್ನಷ್ಟು ಬುದ್ದಿವಂತರಾಗಲು ಅವಕಾಶ ಮಾಡಿಕೊಟ್ಟಿದೆ.ಹಾಗಾಗಿ ಮುಂದಿನ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಂದೇ ಸಿದ್ಧರಾಗಿರಿ ಎಂದರು.
ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಂತ್ರಪಲ್ಕೆ ಅಶೋಕ ಪೂಜಾರಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ತಮ್ಮ ಕಲಿತ ಶಾಲೆಯ ಮೇಲೆ ಗೌರವವಿಟ್ಟು ತಮ್ಮ ಸಂಪಾದನೆಯ ಒಂದಂಶವನ್ನು ಕೊಡುಗೆ ನೀಡಿದಾಗ ಮೂಲಭೂತ ಅವಶ್ಯಕತೆಗಳಲ್ಲಿ ಕೆಲವೊಂದನ್ನು ನಾಧಿಸಿಕೊಳ್ಳಲು ಸಾಧ್ಯ. 2006-07ನೇ ಸಾಲಿನ ಈ ವಿದ್ಯಾರ್ಥಿಗಳು ಸರಿ ಸುಮಾರು 75000 ರೂ ಗಳಷ್ಟು ಮೌಲ್ಯದ ಸಮವಸ್ತ್ರ ನೀಡಿರುವುದು ಶ್ಲಾಘನೀಯ. ಇವರಿಂದ ಇನ್ನಷ್ಟು ಹೆಚ್ಚಿನ ಕೊಡುಗೆಗಳು ಶಾಲೆಗೆ ಸಿಗುವಂತಾಗಲಿ ಎಂದರು.
2006.07 ರ ಸಾಲಿನ ವಿದ್ಯಾರ್ಥಿಗಳಾದ ಪ್ರಸ್ತುತ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಾಣಾಧಿಕಾರಿಯಾಗಿರುವ ರಾಧಿಕಾ ಹೆಬ್ರಿ,ಮುದ್ರಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಉಜೂರು, ಸಾಫ್ಟ್ ವೇರ್ ಇಂಜಿನಿಯರ್ ಉಪ್ಪಳ ಕಾರ್ತಿಕೇಯ,ಸ್ಟ ಉದ್ಯೋಗಿಯಾಗಿರುವ ನವ್ಯ ಶೆಟ್ಟಿ ಮುದ್ರಾಡಿ,ಬೆಳಗುಂಡಿ ಮಾನಸ ಜಿ. ರಾವ್ ಕಾರ್ಕಳ,ಮುದ್ರಾಡಿ ಪಂಚಾಯತ್ ಡಾಟಾ ಎಂಟ್ರಿ ಅಪರೇಟರ್ ಮುದ್ರಾಡಿ ಗುರು ಪ್ರಸಾದ್ ಪೂಜಾರಿ , ಉದ್ಯಮಿ ಪ್ರಸನ್ನ ಆಚಾರ್ಯ ಭಕ್ರೆ, ಗಣೇಶ್ ತುರ್ಕರಬೆಟ್ಟು ಮುದ್ರಾಡಿ ,ಸುಕೀರ್ತಿ ಕುಮಾರ್ ದಾರೆಬೆಟ್ಟು ಮುದ್ರಾಡಿ,ಧನಂಜಯ ಮಾತೃಬೆಟ್ಟು ಮುದ್ರಾಡಿ,ಪೂನಾ ಸೌಜನ್ಯ ಶೆಟ್ಟಿ ಬಚ್ಚಪ್ಪು ಅನಿಸಿಕೆ ವ್ಯಕ್ತ ಪಡಿಸಿ ವಿದ್ಯಾರ್ಥಿ ಜೀವನದ ಸಿಹಿ ನೆನಪುಗಳನ್ನು ಬಿಚ್ಚಿಟ್ಟರು.ವಿದ್ಯಾರ್ಥಿ ನಾಯಕ ಪ್ರತೀಕ್ ಹಳೆ ವಿದ್ಯಾರ್ಥಿಗಳ ಕೊಡುಗೆ ನಮ್ಮ ಶಿಕ್ಷಣಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಮುದ್ರಾಡಿ ಉಪ್ಪರಿಗೆ ಮನೆ ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ 2006 – 07 ನೆಯ ಸಾಲಿನ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಶ್ಶಾಮಲಾ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಘಪತಿ ಹೆಬ್ಬಾರ್ ವಂದಿಸಿದರು. ಶಾಲಾ ಶಿಕ್ಷಕರಾದ ಮಹೇಶ ನಾಯ್ಕ್ ಕೆ., ಕು.ಅನುಷಾ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಕಾನ್ಗುಂಡಿ ಸಹಕರಿಸಿದರು.



.
.
.
.
.
.
.
.
.
.
.
.
.
.
.
.
.
.
.
.
