
ಕಾರ್ಕಳ, ಜೂ.28: ರೋಟರಿ ಕ್ಲಬ್ ಕಾರ್ಕಳ ವತಿಯಿಂದ ನವೀಕೃತ ಪಾರ್ಕಿನ ಉದ್ಘಾಟನಾ ಸಮಾರಂಭವು ರೋಟರಿ ಪಾರ್ಕಿನಲ್ಲಿ ನಡೆಯಿತು.
ರೋಟರಿ ಕ್ಲಬ್ಬಿನ ಹಿರಿಯ ಸದಸ್ಯರಾದ ಭಾರತಿ ಪ್ರಭು ಹಾಗೂ ಸುವರ್ಣ ನಾಯಕ್ ಪಾರ್ಕ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ,
ಇದು ಮಕ್ಕಳಿಗೆ ಮಾತ್ರವಲ್ಲದೇ ಹಿರಿಯ ನಾಗರಿಕರಿಗೆ ಹಾಗೂ ಯುವಕರಿಗೂ ಸಹಕಾರಿಯಾಗಲಿದೆ.ಇದರ ಸದುಪಯೋಗವನ್ನು ಕಾರ್ಕಳದ ಸಮಸ್ತ ಜನರು ಪಡೆಯಲಿ ಎಂದು ಶುಭ ಹಾರೈಸಿದರು.
ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಸದಸ್ಯರಾದ ಮೋಹನ್ ಪಡಿವಾಳ್, ರೋಟರಿ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಜಗದೀಶ್ ಟಿ.ಎ., ಕಾರ್ಯದರ್ಶಿ ಸುರೇಶ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನವೀಕರಣ ಕಾರ್ಯಕ್ಕೆ ಧನಸಹಾಯ ನೀಡಿದ ದಾನಿಗಳಾದ ಹರಿಪ್ರಕಾಶ್ ಶೆಟ್ಟಿ, ಭಾಸ್ಕರ್ ಭಟ್, ತುಕಾರಾಮ್ ನಾಯಕ್, ಯೋಗೀಶ್ ಪ್ರಭು, ಚಂದ್ರಶೇಖರ್ ಹೆಗಡೆ, ಕೀರ್ತನ್ ಶೆಣೈ, ಸಂತೋಷ್ ಡಿ’ಸಿಲ್ವಾ, ನವೀನ್ ಸುವರ್ಣ, ಪ್ರಕಾಶ್ ಆಚಾರ್, ಉದಯಕುಮಾರ್ ಕಡಂಬ, ಅಂತೋನಿ ಡಿಸಿಲ್ವಾ ಮತ್ತು ಡಾ. ವೆಂಕಟಗಿರಿ ರಾವ್ ಹಾಗೂ ಕಾಮಗಾರಿಯಲ್ಲಿ ಸಹಕರಿಸಿದ ಸುಬ್ರಮಣ್ಯ ದೇವಾಡಿಗರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಸಂತ್ ಎಂ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
ವರ್ಧಮಾನ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪರಿಸರದ ಗಿಡ ಗುರುತಿಸುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಲಾಯಿತು.



.
.
.
.
.
.
.
.
.
.
.
.
.
.
.
.
.
.
.
.
