Share this news

ಕಾರ್ಕಳ: ಮೇಸ್ತ್ರಿ ಕೆಲಸಕ್ಕೆ ಬಾರದೇ ಇನ್ನೊಬ್ಬರ ಬಳಿ ಕೆಲಸ ಮಾಡುತ್ತಿರುವ ಕುರಿತು ಸಿಟ್ಟಿಗೆದ್ದ ಕಂಟ್ರಾಕ್ಟರ್ ಓರ್ವ ಗಾರೆ ಮೇಸ್ತ್ರಿಗೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಸಚ್ಚರಿಪೇಟೆ ಎಂಬಲ್ಲಿ ನಡೆದಿದೆ.
ಮೂಡಬಿದಿರೆಯ ನಿವಾಸಿ ಗಾರೆಮೇಸ್ತ್ರಿ ಪದ್ಮನಾಭ(31) ಹಲ್ಲೆಗೊಳಗಾದ ವ್ಯಕ್ತಿ.
ಪದ್ಮನಾಭ ಕಳೆದ ಹಲವು ವರ್ಷದಿಂದ ದಿಲೀಪ್ ಎಂಬುವವರೊಂದಿಗೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚಿನ ಒಂದು ವರ್ಷದಿಂದ ಮುಂಡ್ಕೂರಿನ ಧನಂಜಯ ಎಂಬವರೊಂದಿಗೆ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಏ 1 ರಂದು ಪದ್ಮನಾಭ ಅವರು ಧನಂಜಯ ಜತೆ ದಿಲೀಪ್ ಅವರ ಮನೆಯ ಬಳಿಯ ಅವರ ಸಂಬಂಧಿಕರ ಮನೆಯ ತುಳಸಿಕಟ್ಟೆಯ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿ ರಾತ್ರಿ 11:30ರ ಸುಮಾರಿಗೆ ಸಚ್ಚರಿಪೇಟೆಗೆ ಬಂದಾಗ ದಿಲೀಪನು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊರಟು ಹೋಗಿದ್ದ.ಬಳಿಕ ಪದ್ಮನಾಭ ಅವರು ಬಸ್ಸು ಇಲ್ಲದೇ ಇದ್ದುದರಿಂದ ಮನೆಗೆ ಹೋಗದೇ ಸಚ್ಚರಿಪೇಟೆ ಬಸ್ ನಿಲ್ದಾಣದಲ್ಲಿ ಮಲಗಿದ್ದರು. ತಡರಾತ್ರಿ 01:30ರವೇಳೆ ಆರೋಪಿ ದಿಲೀಪ್ ಅಲ್ಲಿಗೆ ಬಂದು ಮಲಗಿದ್ದ ಪದ್ಮನಾಭ ಅವರ ಕೈ ಕಾಲಿಗೆ ಮರದ ಸೊಂಟೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪದ್ಮನಾಭ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Leave a Reply

Your email address will not be published. Required fields are marked *