Share this news

ಕಾರ್ಕಳ: ವಿಶ್ವದರ್ಜೆಯ ವಕೀಲರಾದ ಡಾ.ಬಿ.ಆರ್ ಅಂಬೇಡ್ಕರ್ ಅವರು ನಮ್ಮ ಸಂವಿಧಾನದ ಶಿಲ್ಪಿಯಾಗಿ ನ್ಯಾಯ, ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಎತ್ತಿ ಹಿಡಿದವರು. ಭಾರತದಲ್ಲಿನ ಸಾಮಾಜಿಕ ತಾರತಮ್ಯ ವಿರುದ್ಧ ನಿರಂತರ ಹೋರಾಟವನ್ನು ಮಾಡಿದವರು. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯದ ಏಳಿಗೆಗಾಗಿ ಶ್ರಮಿಸಿದವರು. ಅವರು ದಲಿತ ಚಳುವಳಿಗಳ ಹಿಂದಿನ ಮಹಾನ್ ಶಕ್ತಿ ಎಂದು ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಶಿಕ್ಷಕ ದೇವದಾಸ್ ಕೆರೆಮನೆ ಹೇಳಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಚಂದ್ರನಾಥ ಬಜಗೋಳಿ, ಸಹಕಾರಿ ಕ್ಷೇತ್ರದ ಅವಿನಾಶ್ ಬಜಗೋಳಿ, ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್, ಶಿಕ್ಷಕಿಯರಾದ ಮಧುಶ್ರೀ, ಅಶ್ವಿನಿ, ಶ್ರೇಯಾ, ಪೂಜಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

 

 

 

 

 

 

 

Leave a Reply

Your email address will not be published. Required fields are marked *