Share this news

ಕಾರ್ಕಳ ಆ 18: ಉಡುಪಿ ಜಿಲ್ಲೆ ಸೇರಿದಂತೆ ಕಾರ್ಕ ಳ ತಾಲೂಕಿನಲ್ಲಿ ವಾಸವಾಗಿರುವ ಭೋವಿ ಸಮುದಾಯದ
ಕಲ್ಲುವಡ್ಡರ್ ಹಾಗೂ ಮಣ್ಣುವಡ್ಡರ್ ಕುಟುಂಬಗಳ ಜೀವನಶೈಲಿ ಹಾಗೂ ನಿರ್ವ ಹಿಸುವ ಕೆಲಸಗಳು ಸೇರಿದಂತೆ ಆ ಸಮುದಾಯದ ಸಮಸ್ಯೆಗಳ ಕುರಿತಂತೆ ತಾಲೂಕು ಕಛೇರಿಯಲ್ಲಿ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖಾ
ಅಧಿಕಾರಿಗಳೊಂದಿಗೆ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಸಭೆ ನಡೆಸಿ ಚರ್ಚಿಸಿದರು.

ಸುಮಾರು ಮೂರು ತಲೆಮಾರುಗಳ ಹಿಂದೆ ತಮಿಳುನಾಡಿನಿಂದ ಕಲ್ಲು ಕೆಲಸವನ್ನು ಅರಸಿಕೊಂಡು ವಲಸೆ ಬಂದ ಸುಮಾರು ಕುಟುಂಬಗಳು ಉಡುಪಿ ಜಿಲ್ಲೆಯಾದ್ಯಂತ ನೆಲೆಸಿದ್ದು, ಕಾರ್ಕಳ ತಾಲೂಕಿನ ಮಿಯ್ಯಾರು,ಕುಕ್ಕುಂದೂರು, ಜಾರ್ಕಳ,ನಿಟ್ಟೆ,ಪಳ್ಳಿ, ಕಲ್ಯಾ, ನಂದಳಿಕೆ ಇತ್ಯಾದಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು
ವಾಸವಾಗಿರುತ್ತಾರೆ. ಸದರಿ ಕುಟುಂಬಗಳ ನಿಖರವಾದ ಮಾಹಿತಿ ತಿಳಿಯಲು ಯಾವುದೇ ಅಂಕಿ ಅಂಶಗಳು ಪ್ರಸ್ತುತ ಲಭ್ಯವಿಲ್ಲದಿರುವ ಕಾರಣ ಆ ಸಮುದಾಯದ ಜನರು ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಆದ್ದರಿಂದ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಮೂರು ತಿಂಗಳ
ಅವಧಿಯಲ್ಲಿ ಸದರಿ ಸಮುದಾಯದ ಕುಟುಂಬಗಳ ದತ್ತಾಂಶಗಳನ್ನು ಕ್ರೋಢೀಕರಿಸುವಂತೆ ಉಭಯ ಇಲಾಖೆಯ
ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.

ಸಭೆಯಲ್ಲಿ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು

                        

                          

                        

                          

 

`

Leave a Reply

Your email address will not be published. Required fields are marked *