Share this news

ಢಾಕಾ: ಬಾಂಗ್ಲಾದೇಶದ ಗದ್ದಲದ ತಾಟಿ ಬಜಾರ್ ಪ್ರದೇಶದ ದುರ್ಗಾ ಪೂಜಾ ಪೆಂಡಾಲ್ ಮೇಲೆ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದು, ಪೂಜೆಯ ಪಾಲ್ಗೊಂಡಿದ್ದ ಸಾವಿರಾರು ಹಿಂದೂ ಭಕ್ತರು ಭಯಬೀತಿಯಿಂದ ಹೊರಗಡೆ ಓಡುವಾಗ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ
ಭಾರೀ ಸದ್ದಿನೊಂದಿಗೆ ಪೆಟ್ರೋಲ್ ಬಾಂಬ್ ಸ್ಪೋಟಗೊಂಡ ಪರಿಣಾಮ ಪೆಂಡಾಲ್ ಗೆ ಹಾನಿಯಾಗಿದ್ದು,“ವಾಯ್ಸ್ ಆಫ್ ಬಾಂಗ್ಲಾದೇಶ್ ಹಿಂದೂ” ತನ್ನ ಎಕ್ಸ್ ಖಾತೆಯಲ್ಲಿ ಈ ಭೀಕರ ಘಟನೆಯ ವಿಡಿಯೋ ಹಂಚಿಕೊAಡಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಮತ್ತೊಂದು ವೀಡಿಯೊದಲ್ಲಿ, ಸಭಾಂಗಣದೊಳಗೆ ಇರಿಸಲಾಗಿರುವ ದುರ್ಗಾ ಪೂಜಾ ವಿಗ್ರಹದ ಕಡೆಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆಯುತ್ತಿರುವ ದೃಶ್ಯ ಸೆರೆಹಿಡಿಯಲಾಗಿದೆ. ಆರೋಪಿಯು ಸರತಿ ಸಾಲಿನಲ್ಲಿ ನಿಂತು ಸ್ಫೋಟಕವನ್ನು ಹಿಂದೂ ದೇವತೆಯ ವಿಗ್ರಹದ ಕಡೆಗೆ ಎಸೆಯುತ್ತಿರುವುದು ಕಂಡುಬAದಿದೆ.

ಬಾAಗ್ಲಾದೇಶದ ಇಸ್ಲಾಮಿಕ್ ಉಗ್ರಗಾಮಿಗಳು ಢಾಕಾದ ತಾಂತಿ ಬಜಾರ್ ಪೂಜಾ ಸಮಿತಿಯ ಪೂಜಾ ಸಭಾಂಗಣದ ಮೇಲೆ ಪೆಟ್ರೋಲ್ ಬಾಂಬ್ ನಿಂದ ದಾಳಿ ನಡೆಸಿದರು ಮತ್ತು ಈ ದಾಳಿಯಲ್ಲಿ ಹಲವಾರು ಹಿಂದೂಗಳು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

 

Leave a Reply

Your email address will not be published. Required fields are marked *