
ಕಾರ್ಕಳ, ಜೂ.22: ಕಳೆದ 6 ತಿಂಗಳಿನಿಂದ ವೈದ್ಯರಿಲ್ಲದೇ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳು ಪರದಾಡುವಂತಾಗಿತ್ತು.ಇಂತಹ ಗಂಭೀರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜೈ ಭೀಮ್ ಸಂಘಟನೆಯು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿಯಾಗಿ ಮನವಿ ಕಲ್ಪಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ತಕ್ಷಣವೇ ವೈದ್ಯರ ನೇಮಕಾತಿ ಮಾಡಲಾಗಿದೆ. ಆದರೆ ಇದನ್ನು ಕೆಲವರು ಲಾಭ ಪಡೆಯಲು ಯತ್ನಿಸಿದ್ದು, ಜೈಭೀಮ್ ಸಂಘಟನೆಯ ಪ್ರಯತ್ನದ ಫಲವಾಗಿ ಪೂರ್ಣಕಾಲಿಕ ವೈದ್ಯರ ನೇಮಕವಾಗಿದೆ ಎಂದು ಜೈಭೀಮ್ ಯುವ ಸಂಘಟನೆ ರಾಜ್ಯಾಧ್ಯಕ್ಷ ಅಶೋಕ್ ಕುಂಟಲ್ಪಾಡಿ ಹೇಳಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಬಡವರಿಗೆ ತುಂಬಾ ತೊಂದರೆಯಾಗಿತ್ತು. ಈ ಕುರಿತು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಕೂಡ ಸರ್ಕಾರದ ಗಮನಕ್ಕೆ ತಂದಿದ್ದರು. ಇದರ ಜೊತೆಗೆ ನಮ್ಮ ಮನವಿಯನ್ನು ಪರಿಗಣಿಸಿದ ನಾಗಲಕ್ಷ್ಮೀ ಚೌಧರಿಯವರು ಆಸ್ಪತ್ರೆಗೆ ಭೇಟಿ ಸಮಸ್ಯೆಗಳ ಕುರಿತು ಚರ್ಚಿಸಿ ವೈದ್ಯರ ನೇಮಕಾತಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರ ನೇಮಕಾತಿಯಾಗಿದ್ದು ಜೈಭೀಮ್ ಸಂಘಟನೆಯ ಪ್ರಯತ್ನದಿಂದ ಬಡರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಕೃಷ್ಣ, ಸಂಘಟನಾ ಕಾರ್ಯದರ್ಶಿ ರಮೇಶ್ ಬಿ ಗಣೇಶ್ ಹಿರಿಯಡ್ಕ,ಹೆಬ್ರಿ ತಾಲೂಕು ಜೈ ಭೀಮ್ ಯುವಸೇನೆ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
