

ನವದೆಹಲಿ,ಸೆ.24: ರಿಯಾಯಿತಿ ದರದಲ್ಲಿ ಮತ್ತು ಸಬ್ಸಿಡಿ ಸಹಿತ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಪಡೆಯಲು ಅಕ್ಟೋಬರ್ 1, 2026 ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಸಬ್ಸಿಡಿ ಸಿಲಿಂಡರ್ಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ಮಾಡಲು, ನಕಲಿ ಸಂಪರ್ಕಗಳನ್ನು ರದ್ದುಗೊಳಿಸಲು ಹಾಗೂ ಗೃಹಬಳಕೆಯ ಗ್ಯಾಸ್ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ದುರ್ಬಳಕೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.
ಈಗಾಗಲೇ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಈ ಪ್ರಕ್ರಿಯೆ ಮಾಡುವ ಅಗತ್ಯವಿಲ್ಲ. ಅವರಿಗೆ ಎಂದಿನAತೆ ಸಬ್ಸಿಡಿ ಸಿಲಿಂಡರ್ಗಳು ಲಭ್ಯವಾಗಲಿವೆ. ದೃಢೀಕರಣ ಮಾಡಿಸದ ಗ್ರಾಹಕರಿಗೆ, ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಸಬ್ಸಿಡಿ ದರದಲ್ಲಿ ಸಿಲಿಂಡರ್ ಬುಕಿಂಗ್ ಮಾಡಲು ಅವಕಾಶ ಸಿಗಲಿದೆ.ಸಚಿವಾಲಯದ ಮಾಹಿತಿ ಪ್ರಕಾರ,ಈಗಾಗಲೇ ದೇಶದ ಶೇ. 89.9 ರಷ್ಟು (ಅಂದಾಜು 27.43 ಕೋಟಿ) ಸಕ್ರಿಯ ಗ್ರಾಹಕರು ಈಗಾಗಲೇ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಆಧಾರ್ ದೃಢೀಕರಣ ಮಾಡುವುದು ಹೇಗೆ?
ಮನೆಗೆ ಎಲ್ಪಿಜಿ ಸಿಲಿಂಡರ್ ಡೆಲಿವರಿ ನೀಡುವ ಸಿಬ್ಬಂದಿಗೆ ಆಧಾರ್ ಕಾರ್ಡ್ ನೀಡಿ ದೃಢೀಕರಣ ಮಾಡಬಹುದು. ಅಥವಾ ನಿಮ್ಮ ಸ್ಥಳೀಯ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ಮಾಡಿಸಬಹುದು. ಇದಲ್ಲದೇ ನಿಮ್ಮ ಗ್ಯಾಸ್ ಸಂಪರ್ಕ ಹೊಂದಿರುವ ಕಂಪೆನಿಗಳ ಮೊಬೈಲ್ ಆ್ಯಪ್ ಮೂಲಕ ಕೂಡ ದೃಢೀಕರಣ ಮಾಡಬಹುದು. ನಿಮ್ಮ ಗ್ಯಾಸ್ ಸಂಪರ್ಕ ಇಂಡೇನ್ ಕಂಪೆನಿಯದ್ದಾಗಿದ್ದರೆ IndianOil ONE app , ಭಾರತ್ ಗ್ಯಾಸ್ :HelloBPCL app , ಎಚ್ಪಿ ಗ್ಯಾಸ್: HP PAY app ಮೂಲಕ ದೃಢೀಕರಣ ಮಾಡಬಹುದು.
ದೃಢೀಕರಣ ಮಾಡಿಸದಿದ್ದರೆ ಏನಾಗಲಿದೆ?
ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿಸಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದ ಗ್ರಾಹಕರಿಗೂ ಗ್ಯಾಸ್ ಸಿಲಿಂಡರ್ ಸಂಪರ್ಕ ರದ್ದಾಗುವುದಿಲ್ಲ. ಆದರೆ ಅವರು ಕಂಪನಿಯ ಪೋರ್ಟಲ್, ವಾಟ್ಸಾಪ್ ಅಥವಾ ಮೂಲಕ ಈ ಬಗ್ಗೆ ನೋಂದಾಯಿಸಬೇಕಾಗುತ್ತದೆ. ಅಂತಹ ಗ್ರಾಹಕರಿಗೆ ಸಬ್ಸಿಡಿ ರಹಿತವಾಗಿ, ಮಾರುಕಟ್ಟೆ ದರದಲ್ಲಿ 5 ಕೆಜಿ ಅಥವಾ 10 ಕೆಜಿಯ ಸಿಲಿಂಡರ್ಗಳನ್ನು ಸ್ಥಳೀಯ ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುತ್ತದೆ.





.
.
.
.
.
.
.
.
.
.
.
.
.
.
.
.
.
.
.
.
