

ನವದೆಹಲಿ,ಸೆ.23:ಗ್ರಾಹಕರಿಗೆ ಅಗತ್ಯವಿಲ್ಲದ ದುಬಾರಿ ಡೇಟಾ ಪ್ಯಾಕ್‌ಗಳನ್ನು ಕಡ್ಡಾಯವಾಗಿ ಹೇರುವುದಕ್ಕೆ ಕಡಿವಾಣ ಹಾಕಿರುವ ಟ್ರಾಯ್, ಕೇವಲ ವಾಯ್ಸ್ ಕಾಲಿಂಗ್ ಹಾಗೂ ಎಸ್‌ಎಂಎಸ್ ಸೇವೆಗಳಿಗಾಗಿ ಕಡಿಮೆ ಬೆಲೆಯ ಪ್ರತ್ಯೇಕ ಪ್ಲಾನ್‌ಗಳನ್ನು ತರಲು ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.
ಪ್ರಸ್ತುತ ಜಿಯೋ, ಏರ್‌ಟೆಲ್ , ವೊಡಾಫೋನ್-ಐಡಿಯಾ ಹಾಗೂ ಬಿಎಸ್‌ಎನ್‌ಎಲ್ ನಂತಹ ಕಂಪನಿಗಳು ನೀಡುತ್ತಿರುವ ಬಹುತೇಕ ರೀಚಾರ್ಜ್ ಪ್ಲಾನ್‌ಗಳಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಜೊತೆಗೆ ಪ್ರತಿದಿನ ಡೇಟಾವನ್ನು ಕಡ್ಡಾಯವಾಗಿ ಸೇರಿಸಲಾಗುತ್ತಿದೆ. ಇದರಿಂದ ಬಡವರು, ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಜನರಿಗೆ ಹೊರೆಯಾಗುತ್ತಿದ್ದು, ಸಾಮಾನ್ಯ ಕೀಪ್ಯಾಡ್ ಫೋನ್ ಬಳಸುವವರು ಮತ್ತು ಇಂಟರ್ನೆಟ್ ಬಳಸದ ಹಿರಿಯ ನಾಗರಿಕರು ಕೇವಲ ಫೋನ್ ಮಾತನಾಡಲು ಅನಿವಾರ್ಯವಾಗಿ ದುಬಾರಿ ಡೇಟಾ ಪ್ಯಾಕ್ ಖರೀದಿಸಬೇಕಾದ ಪರಿಸ್ಥಿತಿಯಿದೆ. ಇದನ್ನು ತಪ್ಪಿಸಲು ಟ್ರಾಯ್ ಮುಂದಾಗಿದ್ದು, ಯಾವುದೇ ಡೇಟಾ ಇಲ್ಲದೆ, ಕೇವಲ ವಾಯ್ಸ್ ಕರೆಗಳು ಮತ್ತು ಎಸ್‌ಎಂಎಸ್ ಮಾತ್ರ ಒಳಗೊಂಡಿರುವ ಕಡಿಮೆ ಬೆಲೆಯ ವೋಚರ್‌ಗಳನ್ನು ಪರಿಚಯಿಸುವುದು ಕಡ್ಡಾಯಗೊಳಿಸಿದೆ. ಡೇಟಾ ಹೊರತುಪಡಿಸಿ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವ್ಯಾಲಿಡಿಟಿ ಹೊಂದಿರುವ ಕೈಗೆಟುಕುವ ದರದ ಪ್ಲಾನ್‌ಗಳನ್ನು ಟೆಲಿಕಾಂ ಸಂಸ್ಥೆಗಳು ಬಿಡುಗಡೆ ಮಾಡಬೇಕು. ಇದರಿಂದ ಬಳಕೆದಾರರು ತಮ್ಮ ಅಗತ್ಯ, ಆದ್ಯತೆ ಹಾಗೂ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ರೀಚಾರ್ಜ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಗಲಿದೆ.
ಈ ಹೊಸ ವಾಯ್ಸ್-ಕರೆ ಪ್ಲಾನ್‌ಗಳ ನಿಖರ ದರಗಳು ಎಷ್ಟು ಮತ್ತು ಕಂಪನಿಗಳು ಇವುಗಳನ್ನು ಮಾರುಕಟ್ಟೆಗೆ ಯಾವಾಗ ಪರಿಚಯಿಸಲಿವೆ ಎಂಬ ಸಂಪೂರ್ಣ ವಿವರಗಳು ಶೀಘ್ರದಲ್ಲೇ ಅಧಿಕೃತವಾಗಿ ಹೊರಬೀಳಲಿವೆ.





.
.
.
.
.
.
.
.
.
.
.
.
.
.
.
.
.
.
.
.
