ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಿಷ್ಣುಮೂರ್ತಿ ಭಜನಾ ಮಂಡಳಿಯ 40ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮವು ಶನಿವಾರ ಸೂರ್ಯೋದಯದೊಂದಿಗೆ ಆರಂಭವಾಯಿತು.
ಈ ಪ್ರಯುಕ್ತ ಕಾರ್ಕಳ ತಾಲೂಕಿನ 40 ಭಜನಾ ತಂಡಗಳಿಂದ ಭಜನಾ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಅಜೆಕಾರು ರಾಮ ಮಂದಿರದಿಂದ ಆರಂಭವಾದ ಭಜನಾ ಮೆರವಣಿಗೆ ಸಾಗಿಬಂದು ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿದ್ದ ವಿಜಯ ಶೆಟ್ಟಿ ಅಜೆಕಾರು,ಪ್ರಶಾಂತ ಶೆಟ್ಟಿ ಕುಂಠಿನಿ,ಭಜನಾ ಮಂಡಳಿಯ ಅಧ್ಯಕ್ಷ ಭೋಜ ಮಡಿವಾಳ, ಜನಾರ್ಧನ ನಾಯಕ್, ಭಾಸ್ಕರ ಶೆಟ್ಟಿ, ಜಗದೀಶ್ ಶೆಟ್ಟಿ ಅಜೆಕಾರು,ನಂದಕುಮಾರ್ ಹೆಗ್ಡೆ, ಹರೀಶ್ ನಾಯಕ್,ತಾರಾನಾಥ ಪೂಜಾರಿ,ಸತೀಶ್ ಶೆಟ್ಟಿ ಮುಂತಾದವರು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.