ಕಾರ್ಕಳ: ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ 2023-2024 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಶಿಲ್ಪಶ್ರೀ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಬಿ ಸದಾಶಿವ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತಾನಾಡಿ, ಸಂಘವು ಈ ವರ್ಷದಲ್ಲಿರೂ 52 ಕೋಟಿ 74 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು ವಾರ್ಷಿಕ ವ್ಯವಹಾರವು ರೂ 235 ಕೋಟಿ 51 ಲಕ್ಷ ಆಗಿರುತ್ತದೆ ಮತ್ತು ಎ ತರಗತಿ ಲೆಕ್ಕ ಪರಿಶೋಧನಾ ವರ್ಗೀಕರಣ ಆಗಿರುತ್ತದೆ.ಸಂಸ್ಥೆಯು 3878 ಸದಸ್ಯರಿದ್ದು ರೂ 1 ಕೋಟಿ 69 ಲಕ್ಷ ಷೇರು ಬಂಡವಾಳ ಹೊಂದಿರುತ್ತದೆ .35 ಕೋಟಿ 56 ಲಕ್ಷ ಮೇಲ್ಪಟ್ಟು ಠೇವಣಾತಿ ಹೊಂದಿದ್ದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ 13 ಕೋಟಿ 13 ಲಕ್ಷ ಸಾಲವನ್ನು ಪಡೆದಿರುತ್ತೇವೆ. ಸದಸ್ಯರಿಗೆ 40 ಕೋಟಿ 60 ಲಕ್ಷ ಸಾಲವನ್ನು ನೀಡಿದ್ದು.13 ಕೋಟಿ 24 ಲಕ್ಷ ಧನವಿನಿಯೋಗವನ್ನು ಮಾಡಿರುತ್ತದೆ. ಅಲ್ಲದೇ 1 ಕೋಟಿ ಆಸ್ತಿಯನ್ನು ಹೊಂದಿದೆ.ಸಾಲದ ವಸೂಲಾತಿಯು 97.55 % ಇದ್ದು ಪ್ರಗತಿಯ ಪಥದಲ್ಲಿ ಮುಂದುವರಿಯತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 1 ಕೋಟಿ 2 ಲಕ್ಷ ಇದ್ದು ಶೇಕಡಾ 13% ಡಿವಿಡೆಂಟ್ ಅನ್ನು ಸದಸ್ಯರಿಗೆ ನೀಡಲು ಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು. ಮಹಾಸಭೆಯ ಎಲ್ಲಾ ಅಜೆಂಡಾಗಳಿಗೆ ಸರ್ವಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು,
ಸಂಘದ ಕಾರ್ಯವ್ಯಾಪ್ತಿಯಲ್ಲಿ ಇರುವ ಉತ್ತಮ ಕೃಷಿ ಸದಸ್ಯರಾದ ಶುಭಶ್ರೀ ಗಂ/ ರಾಜೇಶ್ ಪೂಜಾರಿ ಕಂಬಳಗುರಿ ಬೋಳ,ಭೋಜ ಶೆಟ್ಟಿಗಾರ್ ತಂ/ ಮೆನ್ಪ ಶೆಟ್ಟಿಗಾರ್ ಪರಪ್ಪಾಡಿನಿಟ್ಟೆ ,ಗುಲಾಬಿ ಶೆಟ್ಟಿ ಗಂ/ ರಾಜು ಶೆಟ್ಟಿ ಕೆಳಗಿನ ಮನೆ ಬೇಲಾಡಿ ಇವರನ್ನು ಹಾಗೂ ಉತ್ತಮ ಗ್ರಾಹಕ ಸದಸ್ಯರಾದ ಗೋಪಾಲಕೃಷ್ಣ ಬಿ ತಂ/ ಲಕ್ಷö್ಮಣ ಬಿ ಮಾತೃಛಾಯ ವಂಜಾರಕಟ್ಟೆ ಬೋಳ ,ವಿಜಯ ಸಾಲ್ಯಾನ್ ತಂ/ ಸುಬ್ಬಯ್ಯ ಪೂಜಾರಿ ಮಜಲಕೋಡಿ ಮನೆ ಕಾಂತಾವರ,ರೀಟಾ ಡಿಮೆಲ್ಲೋ ಗಂ/ ಇಂತ್ರು ಹುಂಜಬೆಟ್ಟು ನಿಟ್ಟೆ ಇವರನ್ನು ಸನ್ಮಾನಿಸಲಾಯಿತು.
ನಮ್ಮ ಗ್ರಾಮದ ಸಾಧಕರಾದ 1.ಕುಮಾರಿ ಅಕ್ಷತಾ ಪೂಜಾರಿ ತಂ/ ಭೋಜ ಪೂಜರಿ ಹೊಸ ಮನೆ ಬೋಳಕೋಡಿ ಬೋಳ,ಕುಮಾರಿ ಅನುಶ್ರೀ ಆಚಾರ್ಯ ತಂ/ ಗಣೇಶ ಆಚಾರ್ಯ ಪರಪ್ಪಾಡಿ ನಿಟ್ಟೆ. ರಾಘವೇಂದ್ರ ನಾಯ್ಕ ತಂ/ ರಮೇಶ್ ನಾಯ್ಕ ಬೋಪಾಡಿ ಬೋಳ ,ವಿಜೇಂದ್ರ ಶೆಣೈ ತಂ/sಸೀತಾರಾಮ ಶೆಣೈ ಮೇಲಂಗಡಿ ಬೋಳ ಸಂಘದ ವ್ಯವಹಾರದ ಪ್ರಗತಿಗೆ ಸಹಕಾರವನ್ನು ನೀಡಿದ ಹಿರಿಯ ಸಿಬ್ಬಂದಿಯವರಾದ ಶ್ರೀಮತಿ ದೀಕ್ಷಾ ಶಾಖಾವ್ಯವಸ್ಥಾಪಕಿ ಕಾಂತಾವರ ಶಾಖೆ,ಶ್ರೀಮತಿ ರೂಪ ಕಿರಿಯ ಗುಮಾಸ್ತೆ ನಿಟ್ಟೆ ಶಾಖೆ ಇವರನ್ನುಸನ್ಮಾನಿಸಲಾಯಿತು.
ನಮ್ಮ ಕಾರ್ಯಕ್ಷೇತ್ರದ ಸದಸ್ಯರ ಮಕ್ಕಳಿಗಾಗಿ ಪಿ ಯು ಸಿ ಹಾಗೂ ಎಸ್..ಎಸ್ .ಎಲ್.ಸಿ ಶೇಕಡಾ 90% ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ 36 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಮುರಳಿಧರ ಶರ್ಮ,ಅವಿನಾಶ್ ಮಲ್ಲಿ ,ಕೆ ಗಣಪತಿ ಭಟ್,ಸರ‍್ಯಕಾಂತ್ ಶೆಟ್ಟಿ, ಮೋಹನ್ ದಾಸ್ ಅಡ್ಯಂತಾಯ , ಜಯರಾಮ ಸಾಲ್ಯಾನ್, ನಳಿನಿ ಶೆಟ್ಟಿ,ದಿವ್ಯ ನಾಯಕ್, ಸತೀಶ್ ನಾಯ್ಕ್ ಸುಂದರ ಮತ್ತು ವೃತ್ತಿಪರ ನಿರ್ದೇಶಕರಾದ ದಿನೇಶ್ ಶೆಟ್ಟಿ ,ಪ್ರೇಮ ಮೂಲ್ಯ ಹಾಗೂ ಪ್ರಭಾರ ಮುಖ್ಯಕಾರ್ಯನಿರ್ವಹಣಾದಿಕಾರಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿಯವರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷರಾದ ನವೀನ್‌ಚಂದ್ರಜೈನ್ ಸ್ವಾಗತಿಸಿದರು. ಜ್ಯೋತಿ ಹಾಗೂ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿ, ನಿರ್ದೇಶಕರರಾದ ಸರ‍್ಯಕಾಂತ್ ಶೆಟ್ಟಿ ವಂದಿಸಿದರು.