Author: karavalinews

ಪಡುಬಿದ್ರಿ: ಪಂಚಾಯತ್ ಪಿಡಿಓ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ:ಪಂಚಾಯತ್ ಸದಸ್ಯನ ವಿರುದ್ಧ ಎಫ್ಐಆರ್

ಪಡುಬಿದ್ರಿ: ಪಡುಬಿದ್ರಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ಎಂಬವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪಂಚಾಯತ್ ಸದಸ್ಯನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ನ. 17ರಂದು ಕಚೇರಿಯಲ್ಲಿ ಕರ್ತವ್ಯ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:19.11.2023, ಭಾನುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಶರದೃತು,ಕಾರ್ತೀಕ ಮಾಸ,(ವೃಶ್ಚಿಕ) ಶುಕ್ಲ ಪಕ್ಷ, ನಕ್ಷತ್ರ:ಶ್ರವಣ, ರಾಹುಕಾಲ- 04:34 ರಿಂದ 05:59 ಗುಳಿಕಕಾಲ-03:08 ರಿಂದ 04:34 ಸೂರ್ಯೋದಯ (ಉಡುಪಿ) 06:33 ಸೂರ್ಯಾಸ್ತ – 05:55 ರಾಶಿ ಭವಿಷ್ಯ ಮೇಷ ರಾಶಿ (Aries) :…

ಕಾರ್ಕಳ ತಹಶಿಲ್ದಾರ್ ಅನಂತಶಂಕರ ವರ್ಗಾವಣೆ: ನೂತನ ತಹಶಿಲ್ದಾರ್ ಆಗಿ ನರಸಪ್ಪ ನಿಯುಕ್ತಿ

ಕಾರ್ಕಳ: ಕಾರ್ಕಳ ತಾಲೂಕು ತಹಶಿಲ್ದಾರ್ ಆಗಿರುವ ಅನಂತಶಂಕರ ಅವರು ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನರಸಪ್ಪ ಅವರನ್ನು ನಿಯುಕ್ತಿಗೊಳಿಸಿ ಕಂದಾಯ ಇಲಾಖೆಯ ಜಂಟೀ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಅನಂತಶಂಕರ ಅವರನ್ನು ಕಾಪು ತಾಲೂಕಿನಿಂದ ಕಾರ್ಕಳಕ್ಕೆ ವರ್ಗಾವಣೆಯಾಗಿದ್ದರು. ಕಾರ್ಕಳ…

ಹೆಬ್ರಿ: ದನ ಸಾಗಾಟದ ವಾಹನ ತಡೆದ ಪೊಲೀಸರು; ವಾಹನ ಬಿಟ್ಟು ಐವರು ಆರೋಪಿಗಳು ಪರಾರಿ

ಹೆಬ್ರಿ: ಅಕ್ರಮವಾಗಿ ದನ ಸಾಗಾಟ ಮಡುತ್ತಿದ್ದ ವಾಹನ ಹಾಗೂ ಜಾನುವರುಗಳನ್ನು ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಡ್ಪಾಲು ಗ್ರಾಮದ ಕೂಡ್ಲು ಸಮೀಪದ ಮೇಗದ್ದೆ ಎಂಬಲ್ಲಿAದ ನವೆಂಬರ್ 18ರ ಶನಿವಾರ ಮುಂಜಾನೆ 3 ಗಂಟೆಗೆ 17 ಜಾನುವಾರುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಲು ಗೂಡ್ಸ್ ವಾಹನದಲ್ಲಿ…

ಶಾಸಕರು ಗೌರವಿಸುವುದು ನನಗಲ್ಲ ಸಂವಿಧಾನ ಪೀಠಕ್ಕೆ: ಸಚಿವ ಜಮೀರ್ ಖಾನ್ ಗೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು

ಮಂಗಳೂರು: ವಿಧಾನ ಸಭಾಧ್ಯಕ್ಷ ಹುದ್ದೆ ಕೇವಲ ಸಾಂವಿಧಾನಿಕ ಪೀಠದ ಹುದ್ದೆಯಾಗಿದೆಯೇ ಹೊರತು ಯಾವುದೇ ಜಾತಿ,ಧರ್ಮದ ಆಧಾರದಲ್ಲಿ ನಿರ್ಧಾರವಾಗಿಲ್ಲ,ಎಲ್ಲರೂ ಸಂವಿಧಾನಿಕ ಪೀಠಕ್ಕೆ ಗೌರವ ಕೊಡುತ್ತಾರೆಯೇ ಹೊರತು ನನಗೆ ವೈಯಕ್ತಿಕವಾಗಿ ನೀಡುವ ಗೌರವವಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ. ಸ್ಪೀಕರ್ ಸ್ಥಾನವನ್ನು ಯಾವುದೇ…

ಕಾರ್ಕಳ:ಕಳೆದುಹೋಗಿದ್ದ ಹಣದ ಬ್ಯಾಗ್ ವಾರೀಸುದಾರರಿಗೆ ಹಸ್ತಾಂತರ

ಕಾರ್ಕಳ: ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ಸಿಕ್ಕಿರುವ ನಗದು ಮತ್ತು ಇತರೇ ವಸ್ತುಗಳಿರುವ ಬ್ಯಾಗನ್ನು ಬಂಗ್ಲೆಗುಡ್ಡೆ ನಿವಾಸಿಗಳಾದ ಇಬ್ರಾಹಿಂ ಮತ್ತು ಹರ್ಷದ್ ಎಂಬವರು ಕಾರ್ಕಳ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಬ್ಯಾಗಿನಲ್ಲಿದ್ದ ಮಾಹಿತಿ ಪಡೆದು ವಿಳಾಸ ಪತ್ತೆ ಮಾಡಲಾಗಿದೆ‌. ಹೆಬ್ರಿ ತಾಲೂಕಿನ ಸಂದೇಶ್…

ಉಡುಪಿ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಮಾಲೋಚನಾ ಸಭೆ

ಉಡುಪಿ: ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಹಾಗೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಮತ್ತು ರುದ್ರ ಭೂಮಿ ಚಿತಾಗಾರಗಳ ನಿರ್ಮಾಣ ಬಗ್ಗೆ ಸಮಾಲೋಚನಾ ಸಭೆಯನ್ನು ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಆಶ್ರಯದಲ್ಲಿ ಉಡುಪಿ ಹೋಟೆಲ್ ಕಿದಿಯೂರು ಶೇಷಶಯನ ಸಭಾಗ್ರಹದಲ್ಲಿ ಕಾಪು ಶಾಸಕ…

ಲಿಂಗಾಯತ ನಾಯಕರನ್ನು ಬಳಸಿ ಎಸೆಯುವುದೇ ಬಿಜೆಪಿಯ ಪರಿಪಾಠ : ಟ್ವಿಟರ್ ನಲ್ಲಿ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ಬಳಸಿಕೊಂಡು ಬಳಿಕ ಎಸೆಯುವುದು ಪರಿಪಾಠವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಆರ್.ಅಶೋಕ್ ನೇಮಕ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಅಸಮರ್ಥ ವ್ಯಕ್ತಿಯನ್ನು ವಿಪಕ್ಷ…

ಅಜೆಕಾರು: ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಸಂಕೀರ್ತನೆ ಭಜನೆ

ಕಾರ್ಕಳ : ಅಜೆಕಾರು ವಲಯ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಕಾರ್ತೀಕ ಮಾಸದ ಸಂಕೀರ್ತನೆ, ಭಜನೆ, ಅಷ್ಟಾವಧಾನ ಕಾರ್ಯಕ್ರಮವು ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಇವರ ನೇತೃತ್ವದಲ್ಲಿ ಅಜೆಕಾರು ಗುಡ್ಡೆಅಂಗಡಿ ಹರಿವಾಯು ಕೃಪಾದಲ್ಲಿ ನ.16…

ವರ್ಗಾವಣೆ ದಂಧೆ ಕುರಿತು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪ: ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದೆ, ಈ ನಿಟ್ಟಿನಲ್ಲಿ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಸರ್ಕಾರಿ ಹುದ್ದೆ ವರ್ಗಾವಣೆ ದಂಧೆಗೆ ಸಂಬಂಧಿಸಿದ ನಗದು ಹಣದ ಕುರಿತು ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ…