ಕಾರ್ಕಳ: ಕಾರು ಚಾಲಕನ ಅತಿಯಾದ ವೇಗ ಹಾಗೂ ಓವರ್ ಟೇಕ್ ಧಾವಂತಕ್ಕೆ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಬಂಡಸಾಲೆ ಬಳಿ ಸಂಭವಿಸಿದೆ. ಕಡ್ತಲ ಗ್ರಾಮದ ಕಂಬಳಗುಡ್ಡೆ ನಿವಾಸಿ ಅಶೋಕ್ ಆಚಾರ್ಯ(48) ಗಾಯಗೊಂಡ ಬೈಕ್ ಸವಾರ.
ಕಾರ್ಕಳ ಕಡೆಗೆ ಹೆಬ್ರಿ ಕಡೆಗೆ ಅತೀವೇಗವಾಗಿ ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕ ಜಯರಾಮ ಭಟ್ ಸಭಾಭವನದ ಏರು ರಸ್ತೆಯಲ್ಲಿ ಮುಂದಿನಿAದ ಹೋಗುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡುತ್ತಿದ್ದಾಗ ಎದುರಿನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಅಶೋಕ್ ಆಚಾರ್ಯ ಅವರ ಬೈಕಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕನ್ನು ಸುಮಾರು 25 ಮೀಟರ್ ಎಳೆದೊಯ್ದು ಚರಂಡಿಗೆ ಜಾರಿದೆ. ಅಪಘಾತದ ತೀವೃತೆಗೆ ಬೈಕ್ ಕಾರಿನಡಿಗೆ ಬಿದ್ದು ಅಪ್ಪಚ್ಚಿಯಾಗಿದೆ. ಅಪಘಾತದಿಂದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
K