Category: ಅಪರಾಧ

ಅಜೆಕಾರು: ಬೈಕ್-ಕಾರು ಡಿಕ್ಕಿ: ಸವಾರನಿಗೆ ಗಾಯ

ಕಾರ್ಕಳ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮಂಗಳಾನಗರದ ನಿವಾಸಿ ಪ್ರತಾಪ ಶೆಟ್ಟಿ(33) ಎಂಬವರು ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ಅಜೆಕಾರು ಸಮೀಪದ ಹೆರ್ಮುಂಡೆ ಕ್ರಾಸ್ ಬಳಿ ಸಂಭವಿಸಿದೆ. ಪ್ರತಾಪ್ ಶೆಟ್ಟಿಯವರು ಬೈಕಿನಲ್ಲಿ ತಮ್ಮ ಮನೆಯಿಂದ ಅಜೆಕಾರಿಗೆ ಬರುತ್ತಿದ್ದ…

ಅಜೆಕಾರು: ಪತ್ನಿ ಹಾಗೂ ಪ್ರಿಯಕರನಿಂದ ಪತಿ ಹತ್ಯೆ ಪ್ರಕರಣ: ಪತಿಗೆ ಚಿಕಿತ್ಸೆಯ ನೆಪದಲ್ಲಿ ಪದೇಪದೇ ಆಸ್ಪತೆ ಬದಲಿಸಿದ ಪಾತಕಿ ಪ್ರತಿಮಾ!: ಆರೋಪಿ ಪ್ರತಿಮಾ ಮತ್ತೆ ಪೊಲೀಸ್ ಕಸ್ಟಡಿ ಸಾಧ್ಯತೆ?

ಕಾರ್ಕಳ: ಅಜೆಕಾರಿನ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ತನಿಖೆ ಇಳಿದಿರುವ ಪೊಲೀಸರಿಗೆ ಬಗೆದಷ್ಟು ಹೊಸಹೊಸ ಅಂಶಗಳು ಬಯಲಾಗುತ್ತಿವೆ. ಪ್ರಿಯಕರನ ಜತೆಗೆ ಸೇರಿ ಪತಿಗೆ ಚಟ್ಟ ಕಟ್ಟಿದ್ದ ಪಾತಕಿ ಪತ್ನಿ ಪ್ರತಿಮಾಳ ಕ್ರಿಮಿನಲ್ ಸಂಚಿನ ವಿಚಾರಗಳೇ ಘನಘೋರ. ಪತಿ ಬಾಲಕೃಷ್ಣ ಪೂಜಾರಿಯ ಸಾವಿನಲ್ಲಿ…

ವಿಟ್ಲ ಪೊಲೀಸರ ಕಾರ್ಯಾಚರಣೆ : ಇಬ್ಬರು ಖತರ್ನಾಕ್ ಕಳ್ಳರ ಬಂಧನ

ಬಂಟ್ವಾಳ : ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾಧ ತಂಡದ ಸಿಬ್ಬಂದಿಗಳು 29 ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ವಿಚಾರಿಸಲಾಗಿ ವಿಟ್ಲ ಠಾಣೆಯ…

ಕಾರ್ಕಳ: ಸ್ಕೂಟರ್‌ಗೆ ಕಾರಿನ ಬಾಗಿಲು ಬಡಿದು ಸವಾರನಿಗೆ ಗಂಭೀರ ಗಾಯ

ಕಾರ್ಕಳ: ರಸ್ತೆಯಲ್ಲಿ ಸ್ಕೂಟರ್ ಚಲಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಬಾಗಿಲನ್ನು ಏಕಾಏಕಿ ತೆರೆದ ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೋಳ ನಿವಾಸಿ ಜಯ (59) ಎಂಬವರು ಅ.29 ರಂದು ಕಾರ್ಕಳ ಕಸಬಾ ಗ್ರಾಮದ ಮೂರು…

ಅಜೆಕಾರು: ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾರ್ಕಳ: ಕಳೆದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ. ಸುರೇಶ (28) ಎಂಬುವರು ವಿಪರೀತ ಕುಡಿತದ ಚಟ ಹೊಂದಿದ್ದು ಕಳೆದ 1 ವರ್ಷದಿಂದ ಕಡ್ತಲ ಸಿರಿಬೈಲು ಎಂಬಲ್ಲಿ ತನ್ನ ಅಕ್ಕನ ಗಂಡನ ಮನೆಯಲ್ಲಿದ್ದರು. ಸುರೇಶ ಅವರು ಅ.25…

ಮುನಿಯಾಲು: ಇಲಿ ಪಾಷಾಣ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಹೆಬ್ರಿ: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲಿನಲ್ಲಿ ಸೋಮವಾರ ನಡೆದಿದೆ. ಮುನಿಯಾಲು ಮುದೆಲ್ಕಡಿ ನಿವಾಸಿ ಅಮರನಾಥ (60ವ) ಆತ್ಮಹತ್ಯೆ ಮಾಡಿಕೊಂಡವರು. ಅಮರನಾಥ ಅವರಿಗೆ ಯಾವುದೋ ಕಾಯಿಲೆಯಿಂದ ಕಣ್ಣು…

ಉಡುಪಿ: ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ : ಆರೋಪಿ ಪೊಲೀಸ್ ವಶಕ್ಕೆ

ಉಡುಪಿ : ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾ ಟೌನ್‌ಶಿಪ್ ಬಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಎಂದು ಗುರುತಿಸಲಾಗಿದೆ. ಈತನಿಂದ ಒಟ್ಟು 3,04,610ರೂ.…

ಅಜೆಕಾರು: ಪತ್ನಿ ಹಾಗೂ ಪ್ರಿಯಕರನಿಂದ ಪತಿ ಕೊಲೆ ಪ್ರಕರಣ- ಆರೋಪಿ ದಿಲೀಪ್ ಹೆಗ್ಡೆಗೆ ನ.7ರ ವರೆಗೆ ನ್ಯಾಯಾಂಗ ಬಂಧನ

ಕಾರ್ಕಳ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಕಾರ್ಕಳ ಹಿರ್ಗಾನ ಗ್ರಾಮದ ದಿಲೀಪ್ ಹೆಗ್ಡೆಗೆ ನ.7 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕಾರ್ಕಳ ನ್ಯಾಯಾಲಯ ಆದೇಶಿಸಿದೆ. ಹಿರ್ಗಾನದ ದಿಲೀಪ್ ಹೆಗ್ಡೆ ಪ್ರಿಯತಮೆ ಪ್ರತಿಮಾಳೊಂದಿಗೆ…

ಅಜೆಕಾರು: ಪತ್ನಿ ಪ್ರಿಯಕರನಿಂದ ಗಂಡನ ಹತ್ಯೆ ಪ್ರಕರಣ: ಗಂಡನಿಗೆ ವಿಷವಿಕ್ಕಿ ಚಿಕಿತ್ಸೆ ನೀಡುವ ನೆಪದಲ್ಲಿ ಧನಸಹಾಯ ಸಂಗ್ರಹಿಸಿ ಶೋಕಿ ಜೀವನದ ಕನಸು ಕಂಡಿದ್ದ ರೀಲ್ಸ್ ರಾಣಿ!

ಕಾರ್ಕಳ: ಗಂಡನ ಕೊಲೆ ಪ್ರಕರಣದಲ್ಲಿ ಬಂಧಿತಳಾಗಿ ಪ್ರಿಯಕರನ ಜೊತೆ ಜೈಲಿನ ಕಂಬಿ ಎಣಿಸುತ್ತಿರುವ ಆರೋಪಿ ಪ್ರತಿಮಾಳ ಶೋಕಿ ಜೀವನ ಹಾಗೂ ಶ್ರೀಮಂತಿಕೆ ಜೀವನ ನಡೆಸುವ ಕನಸು ಆಕೆಯ ಕರಾಳಮುಖವನ್ನೇ ಬಯಲು ಮಾಡಿದೆ. ಹೆಂಡತಿಯ ಮೋಸದ ಜಾಲ ಅರಿಯದೇ ಗಂಡ ಬಾಲಕೃಷ್ಣ ಪೂಜಾರಿ…

ಹೆಬ್ರಿ: ಹೋಂ ನರ್ಸ್ ಕೆಲಸದ ವ್ಯಕ್ತಿ ನಗದು ದೋಚಿ ಪರಾರಿ

ಹೆಬ್ರಿ: ಹೆಬ್ರಿಯ ಮನೆಯೊಂದರಲ್ಲಿ ಹೋಂ ನರ್ಸ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿ ಮನೆಯಲ್ಲಿದ್ದ ನಗದು ದೋಚಿ ಪರಾರಿಯಾಗಿರುವ ಘಟನೆ ಅ.27 ರಂದು ನಡೆದಿದೆ. ಹೆಬ್ರಿಯ ಅನಂತ ಆನಂದ ಶೆಣೈ ರವರ ಮನೆಯಲ್ಲಿ ಊರ್ಜಿ ಹೋಂ ಕೇರ್ ಎಜೆನ್ಸಿ ಸೂರತ್ಕಲ್ ಕಡೆಯವರಿಂದ ಹೋಂ ನರ್ಸ್…