Category: ನಿಧನ

ಸಾಣೂರು: ಕೆರೆಯಲ್ಲಿ ಈಜುತ್ತಿದ್ದಾಗ ಉಸಿರುಕಟ್ಟಿ ವ್ಯಕ್ತಿ ಮೃತ್ಯು

ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಎಂಬಲ್ಲಿ ವ್ಯಕ್ತಿಯೊಬ್ಬರು ಕೆರೆಯಲ್ಲಿ ಈಜುತ್ತಿದ್ದಾಗ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಸಾಣೂರಿನ ಕೃಷ್ಣಪ್ಪ (55ವ) ಮೃತಪಟ್ಟವರು. ಅವರು ಲಾರಿಯಲ್ಲಿ ಲೋಡರ್ ಕೆಲಸ ಮಾಡಿಕೊಂಡಿದ್ದು, ನ.02 ರಂದು ಸಾಣೂರು ಗ್ರಾಮ ಮಠದಕೆರೆಯಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಯಾವುದೋ ಕಾರಣದಿಂದ ನೀರಿನಲ್ಲಿ ಮುಳುಗಿ…

ಮುಂಡ್ಕೂರು : ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ: ಕಳೆದೆರಡು ತಿಂಗಳಿನಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡ್ಕೂರು ನಿವಾಸಿ ಬಿ. ಮಂಜುನಾಥ (73) ಆತ್ಮಹತ್ಯೆ ಮಾಡಿಕೊಂಡವರು. ಅವರು ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು, ಅ.30 ರಂದು ರಾತ್ರಿ ಮನೆಯಿಂದ ಹೇಳದೆ…

ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ (50) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರು, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ ಸೇರಿದಂತೆ ಅನೇಕ…

ಮುದ್ರಾಡಿ: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು

ಹೆಬ್ರಿ: ದೀಪಾವಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಯುವಕನೊಬ್ಬ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿಯ ಬಲ್ಲಾಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಮುದ್ರಾಡಿ ಬಲ್ಲಾಡಿಯ ನಿವಾಸಿ ಹರೀಶ್ (45) ಎಂಬವರು ಮುದ್ರಾಡಿ ಮಂಜುನಾಥ ರವರ ಸೊಸೈಟಿ ಬ್ಯಾಂಕ್…

ಮುಂಬಯಿ ಹೊಟೇಲ್ ಉದ್ಯಮಿ ಅಜೆಕಾರು ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ನಿಧನ

ಮುಂಬಯಿ: ಹೊಟೇಲ್ ಉದ್ಯಮಿ, ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ಅಜೆಕಾರಿನ ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ಮುಂಬಯಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ತನ್ನ ಕುಟುಂಬ ವರ್ಗದವರ ಜತೆ ಮುಂಬಯಿನ ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡಾಗ ತಕ್ಷಣವೇ ಅವರನ್ನು ಆಸ್ಪತೆಗೆ…

ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ವಿಧಿವಶ

ಪುತ್ತೂರು: ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ (ಅಕ್ಟೋಬರ್ 20) ತೆರಳಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರು ಇಂದು ಮುಂಜಾನೆ ಹೃದಯಾ…

ನಟ ಕಿಚ್ಚ ಸುದೀಪ್ ತಾಯಿ ಸರೋಜಾ ನಿಧನ

ಬೆಂಗಳೂರು: ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಅವರು ಇಂದು ನಿಧನರಾಗಿದ್ದಾರೆ. ಅವರನ್ನು ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ನಿಧನರಾಗಿದ್ದಾರೆ. ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್…

ಕಾರ್ಕಳ: ಖ್ಯಾತ ಫೋಟೋಗ್ರಾಫರ್ ವಿಘ್ನೇಶ್ ಪ್ರಭು ಬ್ರೈನ್ ಟ್ಯೂಮರ್’ನಿಂದ ನಿಧನ

ಕಾರ್ಕಳ: ಖ್ಯಾತ ಫೋಟೋಗ್ರಾಫರ್ ಹಾಗೂ ಉದ್ಯಮಿ ವಿಘ್ನೇಶ್ ಪ್ರಭು(35) ಮಂಗಳವಾರ ಸಂಜೆ ನಿಧನರಾಗಿದ್ದಾರೆ.. ಕಾರ್ಕಳದ ಎಸ್.ಜೆ ಆರ್ಕೇಡ್ ನಲ್ಲಿ ಕೋಡ್ಸ್ ಕ್ರಿಯೇಷನ್ಸ್ ಸ್ಟುಡಿಯೋ ಮಾಲಕರಾಗಿದ್ದ ವಿಘ್ನೇಶ್ ಪ್ರಭು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅದರೆ ಮಂಗಳವಾರ ಅವರ ಆರೋಗ್ಯದಲ್ಲಿ…

ಬೆಳ್ಮಣ್: ಕುಸಿದು ಬಿದ್ದು ವ್ಯಕ್ತಿ ಸಾವು

ಕಾರ್ಕಳ: ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಶನಿವಾರ ನಡೆದಿದೆ. ಮುಲ್ಲಡ್ಕ ಗ್ರಾಮದ ಲಾರೆನ್ಸ್ ಹೆರಾಲ್ಡ್ ಡಿಮೆಲ್ಲೋ (56) ಎಂಬವರು ಶನಿವಾರ ಬೆಳಿಗ್ಗೆ ಮನೆಯಲ್ಲಿ ಹಂದಿಗೂಡಿನ ಹತ್ತಿರ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದವರನ್ನು…

ಕಾಡುಹೊಳೆ ದುರ್ಗಾದೇವಿ ಹತ್ತುಸಮಸ್ತರ ಕಟ್ಟೆಯ ಹಿರಿಯ ಅರ್ಚಕ ಸುಕುಡು ನಾಯ್ಕ್ ನಿಧನ

ಮುನಿಯಾಲು: ಕಾಡುಹೊಳೆ ಮುನಿಯಾಲು ದುರ್ಗಾದೇವಿ ಹತ್ತು ಸಮಸ್ತರ ಕಟ್ಟೆಯ ಹಿರಿಯ ಅರ್ಚಕ ಹಾಗೂ ದೇವಿ ಪಾತ್ರಿ, ಮರಾಠಿ ಸಮುದಾಯ ಹಿರಿಯ ಮುಖಂಡರಾದ ಸುಕುಡು ನಾಯ್ಕ್ (82)ಮಂಗಳವಾರ ನಿಧನರಾಗಿದ್ದಾರೆ. ಕಳೆದ 4 ದಶಕಗಳಿಂದ ಕಾಡುಹೊಳೆ ಮಹಾಮ್ಮಾಯಿ ದೇವಿಯ ಪರಿಚಾರಕರಾಗಿದ್ದ ಇವರು, ಗೊಂದೋಳು ಪೂಜೆ,ಭೈರವ…