ಹೆಬ್ರಿ : ಕಾಲೇಜು ಬಸ್ ಚಾಲಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹೆಬ್ರಿಯಲ್ಲಿ ಡಿ.8 ರಂದು ನಡೆದಿದೆ.
ಬಡಗಮಿಜಾರು ಗ್ರಾಮದ ಕಾಲೇಜಿನಲ್ಲಿ ಬಸ್ಸು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದ ಶೀನ(63) ಎಂಬವರು ಪ್ರತಿದಿನ ಬಸ್ಸನ್ನು ಹೆಬ್ರಿಯಲ್ಲಿ ನಿಲ್ಲಿಸಿ ಅಲ್ಲೇ ಉಳಿದುಕೊಳ್ಳುತ್ತಿದ್ದರು.
ಸೆ.07 ರಂದು ಎಂದಿನಂತೆ ಬಸ್ಸನ್ನು ಹೆಬ್ರಿ ತಾಣ ದೇವಸ್ಥಾನದ ಬಳಿ ನಿಲ್ಲಿಸಿ ಬೆಳಗ್ಗೆ ಅವರ ಮನೆಗೆ ಬಂದಿದ್ದು ಮರುದಿನ (ಸೆ.8) ಸಂಜೆ ಹೆಬ್ರಿಗೆ ಬಂದಿದ್ದು ತಾಣ ದೇವಸ್ಥಾನದ ಬಳಿ ರಸ್ತೆಯಲ್ಲಿ ಶೀನ ರವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.