ಹೆಬ್ರಿ : ಸೊಪ್ಪು ಕೊಯ್ಯುತ್ತಿದ್ದ ವೇಳೆ ಜೇನುನೊಣ ಕಚ್ಚಿ ಗಾಯಗೊಂಡ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.23ರಂದು ನಡೆದಿದೆ. ಬ್ರಹ್ಮಾವರದ ಕೃಷ್ಣ(53ವ) ಮೃತಪಟ್ಟವರು.
ಕೃಷ್ಣ ಅವರು ಡಿ.19 ರಂದು ಗದ್ದೆಯ ಬಳಿ ಸೊಪ್ಪು ಸವರುತ್ತಿರುವಾಗ ಎಲ್ಲಿಂದಲೋ ಬಂದ ಜೇಣು ನೊಣಗಳು ಎಕಾಎಕಿ ಮೇಲೆ ದಾಳಿ ಮಾಡಿದ್ದು ಅವರ ಕಾಲು ಸರಿಯಿಲ್ಲದ ಕಾರಣ ಓಡಲು ಆಗದೆ ಇದ್ದು ಜೇಣು ನೊಣಗಳು ಕಚ್ಚಿ ಬಿಟ್ಟು ಹೋಗಿದ್ದವು. ನಂತರ ಅವರು ಮನೆಗೆ ಬಂದಾಗ ಸಹೋದರರಾದ ವಿಠಲ ಹಾಗೂ ನರಸಿಂಹರವರು ಕೊಕ್ಕರ್ಣೆ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ನಂತರ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಡಿ.23 ರಂದು ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
